ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಮನವಿ : ಬೆಳ್ತಂಗಡಿ ವಕೀಲರ ಸಂಘದಿಂದ ಸನ್ಮಾನ

New Project (1)
Published on

ಬೆಳ್ತಂಗಡಿ: ಇಲ್ಲಿನ ವಕೀಲ ಸಂಘ ವತಿಯಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಬೆಳ್ತಂಗಡಿ ವಕೀಲರ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಇದೇ ಸಂದರ್ಭ ವಕೀಲರ ಸಂಘದಿಂದ ಬೆಳ್ತಂಗಡಿ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ, ವಕೀಲ ಭವನಕ್ಕೆ ಲಿಫ್ಟ್ ವ್ಯವಸ್ಥೆ ಮಾಡಲು ಮನವಿ ನೀಡಲಾಯಿತು.

ತಾಲೂಕು ವಕೀಲರ ಸಂಘ ಅಧ್ಯಕ್ಷ ವಸಂತ ಮರಕಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲರ ಸಂಘ ಅಧ್ಯಕ್ಷ ಎಲೋಸಿಯಸ್ ಲೋಬೊ ಸನ್ಮಾನ ಪತ್ರ ವಾಚಿಸಿದರು. ಹಿರಿಯ ವಕೀಲ ಬಿ.ಕೆ.ಧನಂಜಯ ರಾವ್ ಮನವಿ ವಾಚಿಸಿದರು. ವಕೀಲರ ಸಂಘ ಕಾರ್ಯದರ್ಶಿ ನವೀನ್ ಬಿ.ಕೆ,., ಉಪಾಧ್ಯಕ್ಷ ಅಶೋಕ್ ಕರಿಯನೆಲ, ಹೈಕೋರ್ಟ್ ವಕೀಲ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಸಮಿತಿ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್ ಗೌಡ, ಕೆಡಿಪಿ ಸದಸ್ಯ ಸಂತೋಷ್ ಬಿ.ಎಲ್, ವಕೀಲರ ಸಂಘ ಪದಾಧಿಕಾರಿಗಳು, ಸದಸ್ಯರು, ವಕೀಲರು ಉಪಸ್ಥಿತರಿದ್ದರು. ವಕೀಲ ಸೇವಿಯರ್ ಪಾಲಿಯಾರ್ ನಿರೂಪಿಸಿದರು. ವಕೀಲರ ಸಂಘ ಸದಸ್ಯೆ ಅಸ್ಮಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net