

ನವಲಗುಂದ: ಅತಿಯಾದ ಮಳೆಯಿಂದ ಬೆಳೆಗಳು ಕೊಚ್ಚಿ ಹೋಗಿ ಸಂರ್ಪಣವಾಗಿ ನಾಶವಾಗಿವೆ. ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ ಹಾನಿಗೆ ಪರಿಹಾರಧನ ನೀಡಬೇಕು ಎಂದು ಕೃಷಿಕ ಸಮಾಜ ಖಜಾಂಚಿ ಪ್ರಕಾಶ ಶಿಗ್ಲಿ ಒತ್ತಾಯಿಸಿದರು.
ನವಲಗುಂದ ತಾಲೂಕು ಕರ್ನಾಟಕ ಕೃಷಿಕ ಸಮಾಜದ ವತಿಯಿಂದ ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಮೂಲಕ ಕೃಷಿ ಮಂತ್ರಿ ಎನ್. ಚೆಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಮುಂಗಾರು ಬೆಳೆಗಳಾದ ಹೆಸರು, ಮೆಣಸಿನಕಾಯಿ, ಹತ್ತಿ, ಗೋವಿನಜೋಳ, ಉಳ್ಳಾಗಡ್ಡಿ, ಶೇಂಗಾ, ಉದ್ದು ಬೀಜ ಬಿತ್ತನೆ ಮಾಡಲಾಗಿದ್ದ ಸಾವಿರಾರು ಹೆಕ್ಟೇರ್ ಪ್ರದೇಶ ಹಾನಿಗೀಡಾಗಿದೆ. ಹೀಗಾಗಿ, ಸರ್ಕಾರ ರೈತ ಸಂಕಷ್ಟ ನಿವಾರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೃಷಿಕ ಸಮಾಜದ ಅಧ್ಯಕ್ಷ ಸೋಮಲಿಂಗಪ್ಪ ಬಳಿಗೇರ, ಆರ್.ಎಚ್. ಕೋನರಡ್ಡಿ, ದಾವಲಸಾಬ್ ಖುದ್ದನವರ, ನಾಗನಗೌಡ ಪಾಟೀಲ, ವಿರೂಪಾಕ್ಷಪ್ಪ ಲಟ್ಟಿ, ಬಸವರಾಜ ಗುಡ್ಡೇನವರ, ಎಸ್.ಜಿ. ಮಾಸ್ತಿ, ಮಲ್ಲಪ್ಪ ಮನಗೂಳಿ, ಇತರರಿದ್ದರು.