ಶೀಘ್ರ ಶಿಕ್ಷಕರ ನೇಮಕ ಮಾಡಿ: ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್ ಮನವಿ

manavi
ಶಿಕ್ಷಕರ ನೇಮಕಾತಿ ಕುರಿತು ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್‌ನ ನಿಯೋಗ ಶಿಕ್ಷಣಾಧಿಕಾರಿಗೆ ಬೇಡಿಕೆಯ ಮನವಿ ಸಲ್ಲಿಸಿತು.
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ದಡ್ಡಲಕಾಡು ಸರ್ಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 1,200ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿದ್ದು, ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಗ್ರಹಿಸಿ ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದ ನಿಯೋಗ ಶಿಕ್ಷಣಾಧಿಕಾರಿಯನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದು, 2015-16ರಲ್ಲಿ ಟ್ರಸ್ಟ್ ಶಾಲೆ ದತ್ತು ಪಡೆದ ಸಂದರ್ಭ ಕೇವಲ 28 ವಿದ್ಯಾರ್ಥಿಳಿದ್ದರು. ಪ್ರಸ್ತುತ 1200ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೇವಲ ಐವರು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಇಬ್ಬರು ಮುಖ್ಯ ಶಿಕ್ಷಕರಿಗೆ ಇಲಾಖೆಯ ಕೆಲಸಗಳೇ ಅಧಿಕವಾಗಿದ್ದು, ತರಗತಿಯಲ್ಲಿ ಬೋಧನೆ ಸಾಧ್ಯವಾಗುತ್ತಿಲ್ಲ. ಅಗತ್ಯ ಸಂಖ್ಯೆಯ ಶಿಕ್ಷಕರನ್ನು ತಕ್ಷಣ ನೇಮಕ ಮಾಡಬೇಕು. ತಪ್ಪಿದ್ದಲ್ಲಿ ಜೂನ್ 6ರಂದು ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳ ಪಾಲಕರ ಜತೆಗೂಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಟ್ರಸ್ಟ್‌ನ ಪುರುಷೋತ್ತಮ ಅಂಚನ್, ರಾಮಚಂದ್ರ ಪೂಜಾರಿ ಕರೆಂಕಿ, ನವೀನ್ ಸೇಸಗುರಿ, ಉದಯ್ ಕರೆಂಕಿ ಉಪಸ್ಥಿತರಿದ್ದರು.

ಎಷ್ಟು ಶಿಕ್ಷಕರು ಅಗತ್ಯ?

ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆ ಇಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಇಬ್ಬರು ಪ್ರಭಾರ ಮುಖ್ಯಶಿಕ್ಷಕರ ಸಹಿತ ಕೇವಲ 5 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ 23 ಮಂದಿ ಶಿಕ್ಷಕರು, 1 ದೈಹಿಕ ಶಿಕ್ಷಕ ಹಾಗೂ ಒಬ್ಬರು ಮುಖ್ಯಶಿಕ್ಷಕರನ್ನು ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net