

ಇಂಡಿ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಮರ್ಪಕ ವಿದ್ಯುತ್ ನೀಡುವಂತೆ ಆಗ್ರಹಿಸಿ ರೈತರು ಹೆಸ್ಕಾಂ ಕಚೇರಿ ಮುಂದೆ ಶ್ರುಕ್ರವಾರ ಪ್ರತಿಭಟನೆ ನಡೆಸಿ ಎಇಇ ಸಂಗಮೇಶ ಮೆಂಡೇಗಾರಗೆ ಮನವಿ ಸಲ್ಲಿಸಿದರು.
ಮುಖಂಡ ಬಸವರಾಜ ಪಾಟೀಲ ಹಂಜಗಿ, ಹಳ್ಳಿಗಳಲ್ಲಿ ಸಿಂಗಲ್ ೇಸ್ ವಿದ್ಯುತ್ ನೀಡುತ್ತಿದ್ದು, ಮನೆಗಳಲ್ಲಿ ಬಲ್ಬ್ ಕೂಡ ಹತ್ತುತ್ತಿಲ್ಲ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಗಳು ಸಮೀಪಿಸಿದ್ದರಿಂದ ಮಕ್ಕಳು ದೀಪದ ಕೆಳಗೆ ಓದುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿದರು.
ಕೆಂಚಪ್ಪ ನಿಂಬಾಳ, ಸಂಗಮೇಶ ಮೆಂಡೆಗಾರ, ಜಟ್ಟೆಪ್ಪ ಸಾಲೋಟಗಿ, ಲಾಯಪ್ಪ ಉಪ್ಪಾರ, ಸುರೇಶ ಜೇವೂರ, ಹಣಮಂತ ಮಸಳಿ, ಶರಣಪ್ಪ ಗುಂದಗಿ, ಗುರಪ್ಪ ಅಗಸರ, ರಮೇಶ ದಳವಾಯಿ, ಬಾಳು ಕೊಟಗೊಂಡ, ಶ್ರೀಮಂತ ಉಪ್ಪಾರ, ಸಿದ್ದಪ್ಪ ಕರಂಡೆ, ದಯಾನಂದ ಕಂಟಗೊಂಡ, ಜಟ್ಟೆಪ್ಪ ತಳವಾರ ಸೇರಿ ಅಂಜುಟಗಿ, ಹಿರೇರೂಗಿ, ತಡವಲಗಾ, ಹಂಜಗಿ ಗ್ರಾಮದ ಗ್ರಾಮಸ್ಥರು ಹಾಗೂ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.