

ಕಬ್ಬೂರ: ಮಾಳಿ/ಮಾಲಗಾರ ನಿಗಮ-ಮಂಡಳಿ ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಆಗ್ರಹಿಸಿ ಪಟ್ಟಣದ ಮಲ್ಲಿಕಾರ್ಜುನ ಮಾಳಿ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಶಾಸಕ ಡಿ.ಎಂ.ಐಹೊಳೆ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ನಮ್ಮ ಸರ್ಕಾರವಿದ್ದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಳಿ/ಮಾಲಗಾರ ನಿಗಮ-ಮಂಡಳಿ ಸ್ಥಾಪನೆಗೆ ಅನುಮೋದನೆ ನೀಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ನಿಗಮ ಸ್ಥಾಪಿಸಲು ಆಸಕ್ತಿ ತೋರಿಸುತ್ತಿಲ್ಲ. ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಚಳಿಗಾಲ ಅಧಿವೇಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಷ್ಕರದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಮನವರಿಕೆ ಮಾಡಬೇಕು ಎಂದರು.
ಹಿರಾ ಶುಗರ್ಸ್ ನಿರ್ದೇಶಕ ಸುರೇಶ ಬೆಲ್ಲದ ಮಾತನಾಡಿ, ಸರ್ಕಾರ ಕೂಡಲೇ ನಿಗಮ-ಮಂಡಳಿ ಸ್ಥಾಪಿಸಿ ನ್ಯಾಯ ಒದಗಿಸಬೇಕು ಎಂದರು.
ಡಾ.ಆರ್.ಕೆ.ಬಾಗಿ ಮಾತನಾಡಿದರು.
ಸದಾಶಿವ ಘೋರ್ಪಡೆ, ಸದಾಶಿವ ಹಳಿಂಗಳೆ, ಮಹಾದೇವ ಪ್ರಧಾನಿ, ಬಸಲಿಂಗ ಕಾಡೇಶಗೋಳ, ಮಹಾದೇವ ಜಿವಣಿ, ಶ್ರೀಶೈಲ ತೆರದಾಳೆ, ಶ್ರೀಶೈಲ ಕುರಬೇಟ, ಜೆ.ಆರ್.ಪಾಟೀಲ, ಕಲ್ಲಪ್ಪ ಕರಗಾವಿ, ರಾಜು ಮಗದುಮ್ಮ, ಮಂಜುನಾಥ ಪಾಟೀಲ, ಮಡ್ಡೆಪ್ಪ ನಿರ್ವಾಣಿ, ರಮೇಶ ಕುರಬೇಟ, ಶಿವರಾಯಿ ಸನದಿ, ಮಹಾದೇವ ಬಾನಿ ಇತರರಿದ್ದರು.