

ನರೇಗಲ್ಲ: ದಿನೇದಿನೆ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ ಹೇಳಿದರು.
ಪಟ್ಟಣದ ಉಪತಹಸೀಲ್ದಾರ್ ಕಚೇರಿಯಲ್ಲಿ ಹಿರಿಯ ನಾಗರಿಕರ ದೌರ್ಜನ್ಯ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಪತಹಸೀಲ್ದಾರ್ಗೆ ಸೋಮವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು.
ನರೇಗಲ್ಲ ಘಟಕದ ಅಧ್ಯಕ್ಷ ದೊಡ್ಡಯ್ಯ ಅರವಟಗಿಮಠ ಮಾತನಾಡಿ, ಹಿರಿಯರ ಮೇಲಿನ ದೌರ್ಜನ್ಯಗಳು, ಕೌಟುಂಬಿಕವಾಗಿ ಸಾರ್ವಜನಿಕ ವಂಚನೆ, ಮೋಸದಿಂದಾಗಿ ನಡೆಯುತ್ತಿದ್ದು, ಇವುಗಳನ್ನು ತಡೆಗಟ್ಟಲು ಸರ್ಕಾರ ಕೆಲವು ಕಟ್ಟು ನಿಟ್ಟಿನ ಕ್ರಮಗಳು ಹಾಗೂ ಕಾನೂನು ಕಠಿಣ ಅನುಷ್ಠಾನ ಅವಶ್ಯವಾಗಿದೆ. ರಾಜ್ಯ ಹಿರಿಯ ನಾಗರಿಕರ ಕೆಲವು ಮಹತ್ವದ ಆರ್ಥಿಕ ಹೊರೆ ಬೀಳದ ಕೆಲವು ಬೇಡಿಕೆಗಳನ್ನು ಹಿರಿಯ ನಾಗರಿಕರ ಇಲಾಖೆ ನಿರ್ದೇಶಕರು ಈ ವರ್ಷದ ಬಜೆಟ್ದಲ್ಲಿ ಮಂಡಿಸಲು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯನ್ನು ಯಾರೂ ನೋಡಿದಂತೆ ಕಾಣುತ್ತಿಲ್ಲ. ಕಾರಣ ಹಿರಿಯ ನಾಗರಿಕರನ್ನು ಕುರಿತು ಇರುವ ಸರ್ಕಾರದ ನಿರ್ಲಕ್ಷ್ಯ ಭಾವನೆ ಕೈ ಬಿಟ್ಟು ಕಾನೂನು ಬದ್ಧ ಹಿರಿಯ ನಾಗರಿಕರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಂ.ಎಸ್. ದಡೇಸೂರಮಠ, ಜಿ.ಎ. ಬೆಲ್ಲದ, ವಿ.ವಿ. ಕೇರಿಯವರ, ಅಶೋಕ ಬೇವಿನಕಟ್ಟಿ, ಶಿವಯೋಗಿ ಜಕ್ಕಲಿ, ಶರಣಪ್ಪ ಹೊಸಮನಿ, ಬಸವರಾಜ ಉಪ್ಪಿನ, ಬಸವರಾಜ ಹಳ್ಳೂರ, ಫಕೀರಪ್ಪ ಧರ್ವಯತ, ಚನ್ನಪ್ಪ ಶಿಸ್ತಗಾರ. ವಿ.ಎಸ್. ಕೋಟಗಿ ಇತರರಿದ್ದರು.