ಶಿಕ್ಷಣ ಇಲಾಖೆ ಆದೇಶ ವಿರೋಧಿಸಿ ಮನವಿ

CTD 18 MANAVI-05
Published on

ಚಿತ್ರದುರ್ಗ: ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯಶಿಕ್ಷಕರ ಹೆಸರಲ್ಲಿ ಜಂಟಿ ಬ್ಯಾಂಕ್ ಖಾತೆ ತೆರೆಯ ಬೇಕೆಂಬ ಆದೇಶ ಹಿಂಪಡೆಯುವಂತೆ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ಪ್ರಮುಖರು ಜಿಲ್ಲಾ ಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.

ಕಳೆದ 20 ಇಪ್ಪತ್ತು ವರ್ಷಗಳಿಂದ ಬಿಸಿಯೂಟ ಯೋಜನೆಯ ಕೆಲಸ ನಿರ್ವಹಿಸುತ್ತಿರುವ ಮುಖ್ಯಅಡುಗೆಯವರು, ಸಹಾಯಕ ಅಡುಗೆಯವರು ಕನಿಷ್ಠ ವೇತನವೂ ಇಲ್ಲದೆ ಯೋಜನೆ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಕೆಲಸದ ಭದ್ರತೆ ಸೇರಿ ಹಲವು ಬೇಡಿಕೆ ಗಳನ್ನು ಈಡೇರಿಸದೆ ಇಡೀ ಯೋಜನೆಯನ್ನೇ ದುರ್ಬಲಗೊಳಿಸುವ ಉದ್ದೇಶದಿಂದ ಜಂಟಿ ಬ್ಯಾಂಕ್ ಖಾತೆ ತೆರೆಯಲು ಶಿಕ್ಷಣ ಇಲಾಖೆ ಆದೇಶಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಐಟಿಯುಸಿ ಪ್ರಧಾನ ಕಾರ‌್ಯದರ್ಶಿ ಜಿ.ಸಿ.ಸುರೇಶ್‌ಬಾಬು,ಅಧ್ಯಕ್ಷ ಎನ್.ಸಿ.ಕುಮಾರಸ್ವಾಮಿ,ಜಿಲ್ಲಾ ಸಂಘಟನಾ ಕಾರ‌್ಯದರ್ಶಿ ಇ. ಸತ್ಯ ಕೀರ್ತಿ,ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಅಧ್ಯಕ್ಷೆ ಸುವರ್ಣಮ್ಮ,ಖಜಾಂಚಿ ರಜಿಯಾ,ದಾಕ್ಷಾಯಿಣಮ್ಮ, ರತ್ನಮ್ಮ, ವಸಂತಬಾಯಿ,ಮಂಗಳಮ್ಮ,ಪರ್ವಿನ್‌ತಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net