ಅಪ್ಪಯ್ಯಸ್ವಾಮಿ ಪುಣ್ಯಸ್ಮರಣೆ, ಶಾರದ ಪೂಜೆ

punyasmarane
Published on

ಕುಶಾಲನಗರ: ಕೂಡಿಗೆಯ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢ ಶಾಲೆಯ ವತಿಯಿಂದ ಪರಮಪೂಜ್ಯ ಸದ್ಗುರು ಅಪ್ಪಯ್ಯಸ್ವಾಮಿ, ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಶಾರದಾ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.

ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ತಮ್ಮ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗಾಗಿ ಮತ್ತು ಜ್ಞಾನದ ಸುದೆಯನ್ನು ಬೆಳಗಿಸಲು ಸಂಭ್ರಮದಿಂದ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತು ಆಡಳಿತ ಮಂಡಳಿ ಸರ್ವ ಸದಸ್ಯರು ಶಾರದಾ ಪೂಜೆ ಹಾಗೂ ಸದ್ಗುರು ಅಪ್ಪಯ್ಯ ಸ್ವಾಮಿ ಅವರ ಪುಣ್ಯಸ್ಮರಣೆ ಭಾಗವಹಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ದೇವಿ ಶಾರದೆಯ ಹಾಗೂ ಪರಮಪೂಜ್ಯ ಸದ್ಗುರು ಅಪ್ಪಯ್ಯ ಸ್ವಾಮಿ ಅವರಿಗೆ ಭಜನೆ ಮಾಡುವ ಮೂಲಕ ಗೀತ ನಮನ ಸಲ್ಲಿಸಿದರು.

ವಿರಾಜಪೇಟೆ ಕಾವೇರಿ ಆಶ್ರಮದ ರಘು ನವರು ಶಾಲಾ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು. ಪರಮಪೂಜ್ಯ ಸದ್ಗುರು ಅಪ್ಪಯ್ಯಸ್ವಾಮಿ ಪುಣ್ಯಸ್ಪರಣಿ ಹಾಗೂ ಶಾರದಾ ಪೂಜೆಯ ಅಂಗವಾಗಿ ನಿವೃತ್ತ ಶಿಕ್ಷಕಿ ಹೇಮಲತಾ ಹಾಗೂ ಶಿವಕುಮಾರ್ ನವರ ನೇತ್ರತ್ವದಲ್ಲಿ ಅನ್ನಸಂತರ್ಪಣ ಕಾರ್ಯಕ್ರಮವನ್ನು ನೆರೆವೇರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಬಿ.ವಿ.ಅರುಣ್ ಕುಮಾರ್, ಕೆ.ಎನ್.ಮಂಜುನಾಥ್ ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎನ್.ಪುಷ್ಪ, ಶಿಕ್ಷಕರಾದ ಎ.ಪಿ.ಸೋಮಯ್ಯ, ಎಂ.ಕುಸುಮ, ಎಂ.ಎಸ್.ಕಾಂತರಾಜ್, ಗಣೇಶ್, ಕುಮಾರ್, ಹಾಗೂ ಶಾಲಾ ವಿದ್ಯಾರ್ಥಿಗಳು, ಪೋಷಕರು, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net