ಅತ್ಯಾಚಾರಿಗೆ 30 ವರ್ಷ ಶಿಕ್ಷೆ

POSCO_act_
Published on

ಅಪ್ಪಾಸಾಹೇಬ (ತೋಡಕರ) ಪಾಟೀಲ, ಅತ್ಯಾಚಾರ , ಸಂಕೇಶ್ವರ ಪೊಲೀಸ್ ಠಾಣೆ Appasaheb (Todakar) Patil, rape, Sankeshwar Police Station

ಚಿಕ್ಕೋಡಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಅಪರಾಧಿ ಹುಕ್ಕೇರಿ ತಾಲೂಕಿನ ಸೋಲ್ಲಾಪುರ ಗ್ರಾಮದ ನಿವಾಸಿ ಅಪ್ಪಾಸಾಹೇಬ (ತೋಡಕರ) ಪಾಟೀಲ (42)ಗೆ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ಅಪರಾಧಿ 2021ರಲ್ಲಿ ಅಪ್ರಾಪ್ತೆ, ಮಾನಸಿಕ ಅಸ್ವಸ್ಥೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಸಂಕೇಶ್ವರ ಪೊಲೀಸ್ ಠಾಣೆ ತನಿಖಾಧಿಕಾರಿ ರಮೇಶ ಛಾಯಾಗೋಳ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net