ಯುವಕರು ಸೇವಾ ಗುಣ ಬೆಳೆಸಿಕೊಳ್ಳಲಿ

religious gathering
ಮುರ್ಲಾಪುರದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ನಾಡೋಜ ಡಾ.ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿದರು. ಪ್ರಮುಖರಾದ ಸಂತೋಷ ಹಿರೇಮಠ, ಕರಬಸಪ್ಪ ಹಂಚಿನಾಳ, ಶಿವು ಮಡಿವಾಳರ, ಸುರೇಶ, ಪ್ರವೀಣಸ್ವಾಮಿ, ಗವಿಸಿದ್ದಯ್ಯ ಇತರರಿದ್ದರು.
Published on

ಅಳವಂಡಿ: ಯುವಕರು ಸಮುದಾಯದ ಚಟುವಟಿಕೆಯಲ್ಲಿ ಪಾಲ್ಗೊಂಡು ಸೇವೆ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಮುಂಡರಗಿಯ ನಾಡೋಜ ಡಾ.ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಮುರ್ಲಾಪುರದಲ್ಲಿ ಶ್ರೀದೇವಿ ಪುರಾಣ ಮಂಗಲ, ಜಂಗಮೋತ್ಸವ ನಿಮಿತ್ತ ನಡೆದ ಧಾರ್ಮಿಕ ಸಭೆಯಲ್ಲಿ ಗುರುವಾರ ಮಾತನಾಡಿದರು. ಮುರ್ಲಾಪುರ ಗ್ರಾಮ ಭಕ್ತಿಯ ಶಕ್ತಿ ಕೇಂದ್ರವಾಗಿದ್ದು, 135 ವರ್ಷಗಳಿಂದ ಶ್ರೀದೇವಿ ಹಾಗೂ ಜಂಗಮರನ್ನು ಆರಾಧಿಸಲಾಗುತ್ತಿದೆ. ಯುವಕರು ಒಳ್ಳೆಯದನ್ನು ಸ್ವೀಕರಿಸಿ, ದುಶ್ಚಟಗಳಿಂದ ದೂರವಿದ್ದು ಕುಟುಂಬದ ಏಳಿಗೆಗೆ ಶ್ರಮಿಸಿ. ಧರ್ಮನಿಷ್ಟೆ ಧಾರ್ಮಿಕ ಭಾವನೆಗಳನ್ನು ಅಳವಡಿಸಿಕೊಳ್ಳಿ ಎಂದರು.

ಮುಂಡರಗಿಯ ಕೆ.ಆರ್.ಬೆಲ್ಲದ, ಪ್ರಥಮ ದರ್ಜೆ ಕಾಲೇಜಿ ಪ್ರಾಚಾರ್ಯ ಸಂತೋಷ ಹಿರೇಮಠ ಮಾತನಾಡಿ, ಪುರಾಣ ಪುಣ್ಯ ಕಥೆಗಳು ಜನರ ಅಂತರಂಗ ಸ್ವಚ್ಛಗೊಳಿಸಿ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸುತ್ತವೆ. ಜಂಗಮೋತ್ಸವ ವ್ಯಕ್ತಿಯ ಆರಾಧನೆ ಅಲ್ಲ ತತ್ವದ ಆರಾಧನೆಯಾಗಿದೆ ಎಂದು ತಿಳಿಸಿದರು.

ರೈತ ಬಸಪ್ಪ ಕಾಮನೂರು ಮಾತನಾಡಿ, ಭೂತಾಯಿ, ಹೆತ್ತ ತಾಯಿ, ಗೋತಾಯಿ ಮೂರು ತಾಯಂದಿರನ್ನು ಪೂಜಿಸಿ ಆರಾಧಿಸಬೇಕು. ಇತ್ತೀಚೆಗೆ ಹೆಚ್ಚು ರಾಸಾಯನಿಕ ಬಳಸಲಾಗುತ್ತಿದ್ದು, ಭೂಮಿ ವಿಷಯುಕ್ತವಾಗುತ್ತಿದ್ದು, ಸಗಣಿ, ಸಾವಯವ ಗೊಬ್ಬರ ಬಳಸಿ ಭೂಮಿಯನ್ನು ಶ್ರೀಮಂತಗೊಳಿಸಿ. ಸಿರಿಧಾನ್ಯಗಳನ್ನು ಬಳಸಿ ಉತ್ತಮ ಆರೋಗ್ಯ ಹೊಂದಿ ಎಂದರು.

ಗುತ್ತಿಗೆದಾರ ಕರಬಸಪ್ಪ ಹಂಚಿನಾಳ, ಪ್ರಮುಖರಾದ ಶಿವು ಮಡಿವಾಳರ, ಸುರೇಶ, ಪ್ರವೀಣಸ್ವಾಮಿ, ಗವಿಸಿದ್ದಯ್ಯ, ಸುತ್ತಲಿನ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net