ವಚನ ಸಾಹಿತ್ಯಕ್ಕೆ ಅಪ್ಪಣ್ಣ ಕೊಡುಗೆ ಅಪಾರ

ಕನಕಗಿರಿ ಎಪಿಎಂಸಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಕ್ಷೌರಿಕ ತಾಲೂಕು ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಮಾಜಿ ಶಾಸಕ ಬಸವರಾಜ ದಢೇಸುಗೂರು ಉದ್ಘಾಟಿಸಿದರು. ಸುಳೇಕಲ್ ರಾಜರಾಜೇಶ್ವರಿ ಬ್ರಹನ್ಮಠದ ಪದ್ಮಾಕ್ಷರಯ್ಯ ಸ್ವಾಮೀಜಿ, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಇತರರಿದ್ದರು.

Published on

ಕನಕಗಿರಿ: ಕಾಯಕದಿಂದ ಸಮಾಜ ಸೇವೆ ಮಾಡಬೇಕು ಎಂದು ವಚನಕಾರ ಹಡಪದ ಅಪ್ಪಣ್ಣ ತಿಳಿಸಿದ್ದಾರೆ ಎಂದು ಸುಳೇಕಲ್ ರಾಜರಾಜೇಶ್ವರಿ ಬ್ರಹನ್ಮಠದ ಪದ್ಮಾಕ್ಷರಯ್ಯ ಸ್ವಾಮೀಜಿ ಹೇಳಿದರು.

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಕ್ಷೌರಿಕ ತಾಲೂಕು ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಳಿತು ತಿನ್ನುವುದಕ್ಕಿಂತ ದುಡಿದು ತಿನ್ನುವುದೇ ಲೇಸು. ಅಪ್ಪಣ್ಣ ಕಾಯಕ ಹಾಗೂ ದಾಸೋಹ ಪರಿಕಲ್ಪನೆಯ ವಿಚಾರ ಎಲ್ಲರಿಗೂ ಸ್ಪೂರ್ತಿ ನೀಡಿದೆ. ವಚನ ಸಾಹಿತ್ಯಕ್ಕೆ ಅಪ್ಪಣ್ಣ ಕೊಡುಗೆ ಅಪಾರ. ಇವರ ಹಾದಿಯಲ್ಲಿ ನಡೆದು ನಮ್ಮವರಿಗಾಗಿ ಸೇವೆ ಮಾಡೋಣ ಎಂದರು.

ಮಾಜಿ ಶಾಸಕ ಬಸವರಾಜ ದಢೇಸುಗುರು ಮಾತನಾಡಿ, ಹಡಪದ ಸಮಾಜಕ್ಕೆ ಪಪಂ ವ್ಯಾಪ್ತಿಯ ಸಿಎ ನಿವೇಶನ ನೀಡಲು ಮನವಿ ಸಲ್ಲಿಸಿದ್ದು, ಅಧಿಕಾರಿಗಳು ಇವರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು. ನಿಯಮದಂತೆ ನಿವೇಶನಕ್ಕೆ ಭರಿಸಬೇಕಾದ ಮೊತ್ತವನ್ನು ನಾನು ಭರಿಸುತ್ತೇನೆ ಎಂದು ಭರವಸೆ ನೀಡಿದರು. ಎಪಿಎಂಸಿ ಸಮುದಾಯ ಭವನದಿಂದ ಹಡಪದ ಅಪ್ಪಣ್ಣ ವೃತ್ತದವರೆಗೆ ಬೈಕ್ ರ‌್ಯಾಲಿ ನಡೆಸಿ ವೃತ್ತಕ್ಕೆ ಪೂಜೆ ಸಲ್ಲಿಸಲಾಯಿತು.

ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಸಮಾಜದ ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ, ತಾಲೂಕು ಅಧ್ಯಕ್ಷ ದೊಡ್ಡಯ್ಯ, ಪ್ರಮುಖರಾದ ಮಹಾಂತೇಶ ಸಜ್ಜನ, ಉದ್ಯಮಿ ಪುರುಷೋತ್ತಮರೆಡ್ಡಿ, ಶರಣಪ್ಪ ಭತ್ತದ, ರವಿ ಭಜಂತ್ರಿ, ರವಿ ಪಾಟೀಲ್, ಸಂಗಮೇಶ ಸುಗ್ರೀವಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net