ಅಪ್ಪಣ್ಣಗೌಡರ ನಿಸ್ವಾರ್ಥ ಸೇವೆ ಸ್ಮರಣೀಯ

23HUK1
Published on

ಹುಕ್ಕೇರಿ: ಸಹಕಾರ ತತ್ತ್ವದಡಿ ತಾಲೂಕಿನ ಜನರಿಗೆ ವಿದ್ಯುತ್ ಸರಬರಾಜು ಮಾಡುವ ಸಂಘ ಸೇರಿ ಹಲವಾರು ಸಂಸ್ಥೆ ಸ್ಥಾಪಿಸಿದ ಸಹಕಾರ ಭೀಷ್ಮ ದಿ.ಅಪ್ಪಣ್ಣಗೌಡ ಪಾಟೀಲ ಹೆಸರು ಸ್ಮರಣೀಯ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

ಪಟ್ಟಣದ ವಿದ್ಯುತ್ ಸಹಕಾರಿ ಸಂಘದಲ್ಲಿ ದಿ.ಅಪ್ಪಣ್ಣಗೌಡರ ೫೧ನೇ ಪುಣ್ಯಸ್ಮರಣೆ ನಿಮಿತ್ತ ಗುರುವಾರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ದೇಶದಲ್ಲಿದ್ದ ೭ ವಿದ್ಯುತ್ ಸಂಘಗಳೆಲ್ಲ ಮುಚ್ಚಿಹೋಗಿ ಇದೊಂದೇ ಉಳಿದಿರುವುದಕ್ಕೆ ಅಪ್ಪಣ್ಣಗೌಡರ ನಿಸ್ವಾರ್ಥ ಮತ್ತು ಸಮಾಜಮುಖಿ ಕನಸು ಕಾರಣವೆಂದರು.

ಸಂಘದ ಉಪಾಧ್ಯಕ್ಷ ಅಜಿತ ಮುನ್ನೋಳಿ ಮತ್ತು ನಿರ್ದೇಶಕರಾದ ಕಲಗೌಡ ಪಾಟೀಲ, ಸತ್ತೆಪ್ಪ ನಾಯಿಕ ಮಾತನಾಡಿ, ಈ ವಿದ್ಯುತ್ ಸಂಘದಿಂದ ಗ್ರಾಹಕರಿಗೆ ಗುಣಮಟ್ಟದ ಹಾಗೂ ತ್ವರಿತ ಸೇವೆ ಸಲ್ಲಿಸಲು ಅನುಕೂಲವಾಗಿದೆ. ಸಂಘದ ಬೆಳವಣಿಗೆಗಾಗಿ ಗ್ರಾಹಕರು ಬಾಕಿ ಬಿಲ್ ತುಂಬಬೇಕೆಂದು ವಿನಂತಿಸಿದರು. ಸಂಘದ ಚುನಾವಣೆಯಲ್ಲಿ ಸ್ವಾಭಿಮಾನಿ ಪೆನಲ್‌ಗೆ ಮತದಾರರು ಗೆಲುವು ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ನಿರ್ದೇಶಕರಾದ ಕೆಂಪಣ್ಣ ವಾಸೇದಾರ, ಶಿವನಗೌಡ ಮದವಾಲ, ಮಹಾದೇವ ಕ್ಷೀರಸಾಗರ, ಶ್ರೀಮಂತ ಸನ್ನಾಯಿಕ, ಮುಖಂಡರಾದ ಗೌಸ್ ಆಜಂ ನಾಯಿಕವಾಡಿ, ಗುರುಸಿದ್ಧ ಮೂಡಲಗಿ, ವ್ಯವಸ್ಥಾಪಕ ದುರದುಂಡಿ ನಾಯಿಕ, ಅಕೌಂಟ್ ಆಫೀಸರ್ ಎಸ್.ಎನ್.ಹಿರೇಮಠ, ಎನ್.ಎಸ್.ಸರದೇಸಾಯಿ. ಉದಯ ಮಗದುಮ್ಮ, ಬಿ.ಎಂ.ಮಗದುಮ್ಮ, ವಿನಾಯಕ ರಾಮದುರ್ಗಿ, ಓಂಕಾರ ಹಿರೇಕೋಡಿ, ದಾನೇಶ ದೊಡದನ್ನವರ, ಎಂ.ಎನ್.ಕರಾಡೆ, ಎಂ.ಎಸ್.ಹೆಬ್ಬಾಳಿ, ಪ್ರೇಮ ಪಾಟೀಲ, ನಿರಂಜನ ಮಗದುಮ್ಮ, ಎಂ.ಎಸ್.ಕುದನೂರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net