ಅಪ್ಪಣ್ಣಗೌಡ ಪೆನಲ್​ ಬೆಂಬಲಿಸಲು ನಿರ್ಧಾರ

15Huk2
Published on

ಹುಕ್ಕೇರಿ: ಲಿಂಗಾಯತ ಮುಖಂಡರು ಸ್ಥಳಿಯ ವಿದ್ಯುತ್​ ಸಹಕಾರ ಸಂಘದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬೆಂಬಲಿಸಲಿದ್ದೇವೆ ಎಂದು ಕಾಂಗ್ರೆಸ್​ ಹುಕ್ಕೇರಿ ಬ್ಲಾಕ್​ ಅಧ್ಯಕ್ಪ ವಿಜಯ ರವದಿ ಹೇಳಿದರು.

ಪಟ್ಟಣ ಹೊರವಲಯದ ಫಾರ್ಮಹೌಸ್​ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಲಿಂಗಾಯತ ಮುಖಂಡರ ಬೆಂಬಲ ಕೇವಲ ಒಂದು ಬಣಕ್ಕೆ ಸೀಮಿತವಾದಂತೆ ಸುದ್ದಿ ಹರಿದಾಡುತ್ತಿದೆ. ಆದರೆ, ಇದು ಸತ್ಯಕ್ಕೆ ದೂರವಾದ ಸಂಗತಿ. ಸಹಕಾರ ವಲಯದ ಚುನಾವಣೆ ಜಾತಿ ಮತ್ತು ಪರಹಿತವಾಗಿರುತ್ತದೆ. ಸಹಕಾರ ಸಂಘ ಸಂಸ್ಥೆಗಳ ಅಭಿವೃದ್ಧಿ ದೃಷ್ಟಿಯಿಂದ ಅಪ್ಪಣ್ಣಗೌಡ ಸಹಕಾರ ಪೆನಲ್​ ಬೆಂಬಲಿಸಲು ನಿರ್ಧರಿಸಲಾಗಿದೆ ಎಂದರು.

ಮುಖಂಡ ರವಿ ಕರಾಳೆ ಮಾತನಾಡಿ, ಜಾರಕಿಹೊಳಿ ಅವರಿಂದ ಲಿಂಗಾಯತರಿಗೆ ಯಾವುದೇ ಅನ್ಯಾಯವಾಗಿಲ್ಲ ಎಂದರು.

ಕಾಂಗ್ರೆಸ್​ ಮುಖಂಡರಾದ ಚಂದ್ರಶೇಖರ ಗಂಗನ್ನವರ, ಶಿವಲಿಂಗ ವಂಟಮೂರಿ, ಸೋಮಶೇಖರ ಮಠಪತಿ, ತಮ್ಮಗೌಡ ಪಾಟೀಲ, ಪುರಸಭೆ ಮಾಜಿ ಸದಸ್ಯ ಬಸಗೌಡ ಪಾಟೀಲ ಮಾತನಾಡಿದರು. ತಾಪಂ ಮಾಜಿ ಸದಸ್ಯ ಬಸವರಾಜ ನಾಯಿಕ, ಹುಕ್ಕೇರಿ ಅರ್ಬನ್​ ಬ್ಯಾಂಕ್​ ಅಧ್ಯಕ್ಪ ಚಂದ್ರಶೇಖರ ಪಾಟೀಲ, ಸಿದ್ದಪ್ಪ ನಾಯಿಕ, ವಿಠ್ಠಲ ಕುಂದನ್ನವರ, ಚಂದ್ರಶೇಖರ ಗಂಡ್ರೊಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net