ಅಪ್ಪಾಜಿ ಗುರುಕುಲದಲ್ಲಿ ಗುರುಕಾರುಣ್ಯದಲ್ಲಿ ಸಂಸ್ಕೃತಿ ಉತ್ಸವ

2302KLB07
Published on

ಕಲಬುರಗಿ: ಗುರುವಿನ ಕಾರುಣ್ಯದ ಜತೆಗೆ ಜೀವನ ಸಾಗಿಸಿದರೆ ಗುರಿ ತಲುಪುವ ಪ್ರತಿ ಹೆಜ್ಜೆಗೂ ಶಕ್ತಿ ಬಂದು, ಪ್ರತಿ ಆಸೆಯೂ ಈಡೇರುತ್ತದೆ. ಆ ನಿಟ್ಟಿನಲ್ಲಿ ಅಪ್ಪಾಜಿ ಗುರುಕುಲ ಗುರುಮಾರ್ಗದಲ್ಲಿ ಸಾಗುತ್ತಿದೆ ಎಂದು ಜಿಡಗಾ, ಮುಗಳಖೋಡದ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.

ನಗರದ ಉದನೂರದ ಹಿರೇಗೌಡ ಲೇಔಟ್‌ನಲ್ಲಿನ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಗುರುಕುಲ ಸಾಂಸ್ಕೃತಿಕ ಉತ್ಸವ ಮತ್ತು ಅಪ್ಪಾಜಿ ಗುರುಸೇವಾ ಭಾಗ್ಯ ರಾಷ್ಟç ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗುರುಮಾರ್ಗ, ಗುರುವಿನ ಆಶೀರ್ವಾದವಿಲ್ಲದೇ ಒಂದು ಕಡ್ಡಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ಗುರುಕೃಪೆಯಿಂದ ಸಾಗಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂಬುದಕ್ಕೆ ಗುರುಕುಲ ಶಾಲೆಯ ಫಲಿತಾಂಶ, ಪ್ರಗತಿಯೇ ಸಾಕ್ಷಿ ಎಂದು ಹೇಳಿದರು.

ಉದ್ಯಮಿಗಳು, ಮಠ, ಮಾನ್ಯಗಳು, ರಾಜಕಾರಣಿಗಳು ಶಾಲೆ ನಿರ್ಮಿಸಬಹುದು. ಆದರೆ ಬಡತನದಿಂದ ಬೆಳೆದ ವ್ಯಕ್ತಿ ಕಟ್ಟಿದ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತದೆ ಎಂಬುದಕ್ಕೆ ಜೀವಂತ ನಿದರ್ಶನ ಗುರುಕುಲ ಸಂಸ್ಥೆ. ಬಡತನದಲ್ಲಿ ಬೆಳೆದವರಿಂದಲೇ ಮೌಲ್ಯ, ನೈತಿಕತೆ ಉಳಿಯುತ್ತದೆ. ಮಕ್ಕಳಿಗೆ ಬಡತನದ ಮಾಹಿತಿ ಇರಬೇಕು. ಸಂಸ್ಕೃತಿಯನ್ನು ಬಿತ್ತಿ ಬೆಳೆಸಬೇಕು ಎಂದು ಹಾರೈಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಸಂಸ್ಕೃತಿಕ ಉತ್ಸವಗಳು ಮಕ್ಕಳಲ್ಲಿ ಚೈತನ್ಯ ತುಂಬುತ್ತವೆ. ಗುರುವಿನ ಸ್ಮರಣೆ, ಸೇವೆಯೂ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತದೆ. ಮಕ್ಕಳು ಪಠ್ಯದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಬೆಳೆಯಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಧ್ಯಮ ಅಕಾಡೆಮಿಯಿಂದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದೇವಯ್ಯ ಗುತ್ತೇದಾರ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಅವರನ್ನು ಸತ್ಕರಿಸಲಾಯಿತು.

ಅಪ್ಪಾಜಿ ಗುರುಸೇವಾ ಭಾಗ್ಯ ರಾಷ್ಟಪ್ರಶಸ್ತಿ: ಜಿಡಗಿಯ ಶ್ರೀ ಸಿz್ದÁರಾಮ ಶಿವಯೋಗಿಗಳವರ ಜೀವಿತಾವಧಿಯಲ್ಲಿ ಗುರುಸೇವೆ ಮಾಡಿದ ಮಹಾನುಭಾವರಾದ ಶ್ರೀ ಬಸವಣ್ಣಪ್ಪ ದೇವರು, ಚಿಂಚೋಳಿಯ ಐನೋಳ್ಳಿಯ ಗುರುಲಿಂಗಯ್ಯ ಬಸವಣಯ್ಯ, ಮೈಂದರ್ಗಿಯ ಭಾಗೀರಥಿ ಭೂತಿ, ನಾಗಮ್ಮ ಕಿವಡೆ, ಮೇಕಳಕ್ಕಿಯ ವಿಠಲ ರಾಯಪ್ಪ ಅವರಿಗೆ ಅಪ್ಪಾಜಿ ಗುರುಸೇವಾ ಭಾಗ್ಯ ರಾಷ್ಟçಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೂರ್ಯಕಾಂತ ಮದಾನೆ ಅಧ್ಯಕ್ಷತೆ ವಹಿಸಿದರು. ಸಂಸ್ಥೆ ಕಾರ್ಯದರ್ಶಿ ರಾಜಕುಮಾರ ಉದನೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಪ್ರಮುಖರಾದ ಮಾದೇವ ಬೆಳ್ಳಣ್ಣನವರ, ಜಗನ್ನಾಥ ಪಾಟೀಲ್, ಬಸವರಾಜ ಬಿರಬಿಟ್ಟಿ, ಚನ್ನು ಡಿಗ್ಗಾವಿ, ಹನುಮಂತರಾಯ ಕಪನೂರ, ಆನಂದ ಲೇಂಗಟಿ, ಶರಣಬಸವ ಜಂಗಿನಮಠ, ರೇವಣಸಿದ್ಧ ದುಧನಿ, ಸಂಸ್ಥೆ ಅಧ್ಯಕ್ಷೆ ಭಾಗಮ್ಮ ಆರ್. ಉದನೂರ, ಶಿP್ಷÀಕರಾದ ಸುಧಾ, ಐಶ್ವರ್ಯ, ಉಷಾ, ವೈಷ್ಣವಿ, ಅಭಿಲಾಶ, ರಾಹುಲ್, ಸಾವಿತ್ರಿ, ಶಾಂತ ಸಾವಿತ್ರಿ ಇತರರಿದ್ದರು. ವೈಷ್ಣವಿ, ಸುರೇಶ ಬಡಿಗೇರ ನಿರೂಪಣೆ ಮಾಡಿದರು.

ಸಾಂಸ್ಕೃತಿಕ ಸಮ್ಮಿಲನ: ಅಪ್ಪಾಜಿ ಗುರುಕುಲ ಸಾಂಸ್ಕೃತಿಕ ಉತ್ಸವದಲ್ಲಿ ಪುಟ್ಟ ಪುಟ್ಟ ಮಕ್ಕಳಿಂದ ನೃತ್ಯ, ನಾಟಕ, ಮೂಕಾಭಿನಯ, ಸಂಗೀತ ಗಾಯನ, ಭರತ ನಾಟ್ಯವೂ ಪ್ರೇಕ್ಷಕರನ್ನು ರಂಜಿಸುವ ಜತೆಗೆ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಯಿತು. ವಿದ್ಯಾರ್ಥಿಗಳ ಭಾಷಣಕ್ಕೆ ಪೋಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net