

ಕಲಬುರಗಿ: ನಗರದ ಉದನೂರದ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.97 ಫಲಿತಾಂಶ ಬಂದಿದೆ. ಶಾಲೆಯ ವಿದ್ಯಾರ್ಥಿನಿ ಭಕ್ತಿ ಬಾಬುಗೌಡ 603 (ಶೇ.೯೬.೪೮) ಅಂಕದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆಯುವ ಜತೆಗೆ ಜಿಲ್ಲೆಯ ಗಮನ ಸೆಳೆದಿದ್ದಾಳೆ.
ವಿದ್ಯಾರ್ಥಿನಿ ರಕ್ಷಿತಾ 551 (೮೮.೧೬) ಅಂಕದೊಂದಿಗೆ ದ್ವಿತೀಯ, ವಿಶಾಲ ೫೩೫ (ಶೇ.೮೫.೬೦) ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷೆ ಭಾಗಮ್ಮ ಬಿರಾದಾರ ಉದನೂರ, ಕಾರ್ಯದರ್ಶಿ ರಾಜಕುಮಾರ ಬಿರಾದಾರ, ಪ್ರಾಂಶುಪಾಲ, ಶಿಕ್ಷಕರು, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ಗುಣಮಟ್ಟದ ಬೋಧನೆ, ಶೈಕ್ಷಣಿಕ ವಾತಾವರಣ ರೂಪಿಸಿರುವುರಿಂದ ಉತ್ತಮ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಓದಿಗೆ ಪೂರಕ ಬೋಧನಾ ಶೈಲಿ ಅಳವಡಿಸಿ ಸಮಗ್ರ ಶಿಕ್ಷಣ ಅಭಿವೃದ್ಧಿಗೆ ಶ್ರಮ, ಶಿಕ್ಷಕ ವೃಂದ, ಪಾಲಕ ಸಹಕಾರದಿಂದ ಮಾದರಿ ರಿಸಲ್ಟ್ ಬಂದಿದೆ.| ಭಾಗಮ್ಮ ಬಿರಾದಾರ ಉದನೂರಅಧ್ಯಕ್ಷೆ ಅಪ್ಪಾಜಿ ಶಿಕ್ಷಣ ಟ್ರಸ್ಟ್