

ಬೆಂಗಳೂರು: ಮಾನವೀಯ ಸಂವೇದನೆಗಳ ಜಾಗೃತಿಗೆ ಸಂಗೀತ ಸಹಾಯಕವಾಗಿದೆ ಎಂದು ಜಾನಪದ ತಜ್ಞ ಅಪ್ಪಗೆರೆ ತಿಮ್ಮರಾಜು ಹೇಳಿದ್ದಾರೆ.
ಕೆಂಪೇಗೌಡನಗರದಲ್ಲಿರುವ ಉದಯಭಾನು ಕಲಾಸಂ ಆಯೋಜಿಸಿರುವ ಮುಂಗಾರು ಸಂಗೀತ ರಸಗ್ರಹಣ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಜಾನಪದ ಪರಂಪರೆಯಲ್ಲಿ 650ಕ್ಕೂ ಹೆಚ್ಚು ಕಲೆಗಳು ಈ ನೆಲದಲ್ಲಿ ವಿಕಸಿಸಿವೆ. ವರ್ತಮಾನದಲ್ಲಿ ಅವುಗಳೇ ಜನಪದ ಪ್ರದರ್ಶನ ಕಲೆಗಳಾಗಿ ಹೊಸ ತಲೆಮಾರಿನ ಕಲಾಭಿವ್ಯಕ್ತಿಗೆ ಮಾಧ್ಯಮಗಳಾಗಿವೆ, ಭವಿಷ್ಯದಲ್ಲೂ ಪ್ರಭಾವ ಬೀರಲಿವೆ ಎಂದು ತಿಳಿಸಿದರು.
ಉದಯಭಾನು ಕಲಾ ಸಂಘದ ಗೌರವ ಕಾರ್ಯದರ್ಶಿ ರಾಧಾಕೃಷ್ಣ ಮಾತನಾಡಿ, ಸಂವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿದೆ. ಸಾಹಿತ್ಯ, ಸಂಸತಿ, ಶಿಕ್ಷಣ, ಆರೋಗ್ಯ, ವೃತ್ತಿಕೌಶಲ ಮತ್ತು ಕಲಾಕೌಶಲ ತರಬೇತಿಗಳಲ್ಲಿ ಹೆಚ್ಚಿನ ಜನರಿಗೆ ಸಹಕಾರಿ ಆಗುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಇದೀಗ 98 ಶಿಬಿರಾರ್ಥಿಗಳು ಉಚಿತ ಸ್ವರ& ಲಯ& ಧ್ವನಿ ಸಂಸ್ಕಾರ ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂದರು.
ಉದಯಭಾನು ಕಲಾ ಸಂಘದ ಸಂಸ್ಥಾಪಕ ಎಲ್.ವೆಂಕಟಪ್ಪ, ಅಧ್ಯಕ್ಷ ರಾಮೇಗೌಡ, ಶಿಬಿರದ ಸಂಯೋಜಕ ಹರೀಶ ನರಸಿಂಹ ಇತರರಿದ್ದರು.