ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅಪೂರ್ವ ರಿಯಾ, ಜಿಂಕೆ ಸೇರ್ಪಡೆ

Pilikula park deer riya
Published on

ಗುರುಪುರ: ಪಿಲಿಕುಳ ಜೈವಿಕ ಉದ್ಯಾನಕ್ಕೆ ತಿರುವನಂತಪುರಂ ಮೃಗಾಲಯದಿಂದ ಎರಡು ಬಿಳಿ ರಿಯಾ, ಎರಡು ಕಂದು ರಿಯಾ ಮತ್ತು ಮೂರು ಜೌಗು ಜಿಂಕೆ ತರಲಾಗಿದೆ. ಇದಕ್ಕೆ ಪ್ರತಿಯಾಗಿ ಅಲ್ಲಿನ ಮೃಗಾಲಯಕ್ಕೆ ಪಿಲಿಕುಳದಿಂದ ಮೂರು ಕಾಳಿಂಗ ಸರ್ಪ ಹಾಗೂ ನಾಲ್ಕು ವಿಟೇಕರ್ಸ್ ಹಾವು ಕಳುಹಿಸಲಾಗಿದೆ.

ಪಿಲಿಕುಳ ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರು ಈ ಅಪೂರ್ವ ಪಕ್ಷಿ ಮತ್ತು ಪ್ರಾಣಿಗಳನ್ನು ವೀಕ್ಷಿಸಬಹುದು. ರಿಯಾವು ಉಷ್ಟ್ರಪಕ್ಷಿ ಜಾತಿಗೆ ಸೇರಿದ ಹಕ್ಕಿಯಾಗಿದ್ದು, ಇದು ದಕ್ಷಿಣ ಅಮೆರಿಕದ ಹಾರಾಡದ ಅತಿ ದೊಡ್ಡ ಪಕ್ಷಿಯಾಗಿದೆ. ಇವುಗಳು ಹಸಿರು ಸಸ್ಯ, ಧಾನ್ಯ, ಹುಳು ಹುಪ್ಪಟೆ ತಿಂದು ಬದುಕುತ್ತವೆ. ಅತಿಯಾದ ವೇಗದಲ್ಲಿ ಓಡುವ ಹಕ್ಕಿ ಇದಾಗಿದೆ.

ಜೌಗು (ಸ್ವಾಂಪ್) ಜಿಂಕೆಗಳ ಕೊಂಬುಗಳು ಒಂದರಿಂದ 12ರವರೆಗೆ ಕವಲೊಡೆಯುತ್ತವೆ. ಆದ್ದರಿಂದ ಇದಕ್ಕೆ ಬಾರಸಿಂಘಾ ಎಂದು ಕರೆಯಲಾಗುತ್ತದೆ. ಇವುಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳಾಗಿವೆ ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net