ಎಪಿಎಂಸಿಯಲ್ಲಿ ವಹಿವಾಟು ಬಂದ್

apmc
Published on

ಬೆಳಗಾವಿ: ಎಪಿಎಂಸಿ ಮಾರುಕಟ್ಟೆಯ ಆಹಾರ ಧಾನ್ಯ, ಈರುಳ್ಳಿ ವರ್ತಕರು ತಮ್ಮ ವರ್ತಕರ ಸಂಘಗಳಿಂದ ಸಂಪೂರ್ಣ ಮಾರುಕಟ್ಟೆ ಶುಲ್ಕ ಮನ್ನಾ ಮಾಡಲು ಒತ್ತಾಯಿಸಿ ಜು. 27ರಿಂದ ಅನಿರ್ದಿಷ್ಟ ಅವಧಿಗೆ ವಹಿವಾಟು ಬಂದ್ ಮಾಡುವ ಕುರಿತು ಸಮಿತಿಗೆ ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ರೈತರು ಉತ್ಪನ್ನಗಳನ್ನು ಮಾರಾಟಕ್ಕಾಗಿ ಎಪಿಎಂಸಿಗೆ ತರಬಾರದು ಎಂದು ಕೃಷಿ ಉತ್ಪನ್ನ ಮಾರುಕಟ್ಟಿ ಸಮಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net