ಎಪಿಎಂಸಿ ಸಮಸ್ಯೆ ಪರಿಹರಿಸಲು ಸೂಚನೆ, ಅಧಿಕಾರಿಗಳೊಂದಿಗೆ ಮಾಜಿ ಸಿಎಂ ಶೆಟ್ಟರ್ ಸಭೆ

IMG_20240103_212956_656-1.jpg
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಶ್ರೀಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಅವರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಮಸ್ಯೆಗಳ ಪರಿಹಾರ ಕುರಿತು ಚಚಿರ್ಸಿದರು. ರೈತರು, ವ್ಯಾಪಾರಸ್ಥರು ಹಾಗೂ ಪೇಟೆ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿದರು.

ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ಮಾತನಾಡಿ, ಮಾರುಕಟ್ಟೆಯಲ್ಲಿನ ಮೂಲ ಸೌಲಭ್ಯಗಳ ಸುಧಾರಣೆ ಮತ್ತು ವ್ಯಾಪಾರ ಅಭಿವೃದ್ಧಿಗೆ ಅವಶ್ಯವಿರುವ ಸವಲತ್ತುಗಳ ಬಗ್ಗೆ ಪ್ರಸ್ತಾಪಿಸಿ ಮನವಿ ಸಲ್ಲಿಸಿದರು.

ಬೇಡಿಕೆಗಳೇನು: ಎಪಿಎಂಸಿಯಲ್ಲಿ ಯುಜಿಡಿ ಲೈನ್ ಹಾಕಿಸುವುದು, ಶುದ್ಧ ಕುಡಿಯುವ ನೀರು, ಸುಲಭ ಶೌಚಗೃಹ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಹಾರ ಗೃಹ, ಬೀದಿದೀಪಗಳ ವ್ಯವಸ್ಥೆ ಮಾಡುವುದು. ವಾಹನಗಳ ಸುಗಮ ಸಂಚಾರ, ಗೇಟ್ಗಳ ಮುಂದೆ ವರ್ತುಳ ರಸ್ತೆ ನಿರ್ಮಾಣ, ರೈತರ ವಾಹನಗಳನ್ನು ತಡೆದು ತೊಂದರೆ ನೀಡದಂತೆ ಪೊಲೀಸ್ ಇಲಾಖೆಗೆ ಸೂಚಿಸುವುದು, ವರ್ತಕರಿಗೆ ಆಸ್ತಿ ತೆರಿಗೆ ರಿಯಾಯಿತಿ ನೀಡುವುದು, ಎಪಿಎಂಸಿಯಲ್ಲಿ ಇಂದಿರಾ ಕ್ಯಾಂಟೀನ್, ಕರ್ನಾಟಕ ಒನ್ ಕೇಂದ್ರ, ಪಾಲಿಕೆ ಉಪ ಕಚೇರಿ ತೆರೆಯುವುದು ಸೇರಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ಶೆಟ್ಟರ್ ಅವರಿಗೆ ಸಲ್ಲಿಸಲಾಯಿತು.

ಸಂಘದ ಮನವಿಗೆ ಸ್ಪಂದಿಸಿದ ಜಗದೀಶ ಶೆಟ್ಟರ್ ಅವರು, ಎಪಿಎಂಸಿಗೆ ಬೇಕಾದ ಅಗತ್ಯಗಳನ್ನು ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. 2&3 ದಿನದಲ್ಲಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಹಾಗೂ ವ್ಯಾಪಾರಸ್ಥರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಿ ತಮಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ಭಜಂತ್ರಿ, ಎಸಿಪಿ ರಾಜು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಎಪಿಎಂಸಿ ಕಾರ್ಯದರ್ಶಿ ಕೆ.ಬಿ. ಮೇರುನಂದನ, ಸಂದ ಉಪಾಧ್ಯ ಅನೀಲ ಓಸ್ತವಾಲ, ಗೌರವ ಕಾರ್ಯದಶಿರ್ ಅಶೋಕ ಬಾಳಿಕಾಯಿ, ಸಹಗೌರವ ಕಾರ್ಯದಶಿರ್ ರವಿ ಮರದ, ಮಾಜಿ ಅಧ್ಯಕ್ಷ ಗಂಗನಗೌಡ ಪಾಟೀಲ, ಗುಂಡಪ್ಪ ಸಾವುಕಾರ, ಚಂದ್ರಶೇಖರ ಪೂಜಾರ, ಶಿವಯೋಗಿ ಹೊಸಕಟ್ಟಿ, ಶಂಕರಗೌಡ ಸೋಮನಗೌಡ್ರ, ಭರಮಗೌಡ ಪಾಟೀಲ, ಸದಾನಂದ ಶಿಗ್ಗಾಂವ, ಶಿವಲಿಂಗಪ್ಪ ಜಿಗಜಿನ್ನಿ, ಬಸವರಾಜ ಯಕಲಾಸಪೂರ, ರುದ್ರಪ್ಪ ಬೆಟಗೇರಿ, ಪ್ರಮೋದ ಸೋಳಂಕಿ, ಸಲೀಂ ಬ್ಯಾಹಟ್ಟಿ, ಆಹಾರಧಾನ್ಯ ವರ್ತಕರ ಸಂದ ಅಧ್ಯಕ್ಷ ಮಲ್ಲಿಕಾರ್ಜುನ ಬೋರಟ್ಟಿ, ಚನ್ನು ಹೊಸಮನಿ, ಹಣ್ಣು&ಹಂಪಲು ವರ್ತಕರು, ಕಾಮಿರ್ಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net