ಎಪಿಎಂಸಿ ಮಾರುಕಟ್ಟೆಯ ಮಂಡಿಗಳಿಗೆ ನುಗ್ಗಿದ ಮಳೆ ನೀರು

30 shrnivasapura 2
Published on

ಶ್ರೀನಿವಾಸಪುರ: ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ನೀರು ಎಪಿಎಂಸಿ ಮಾರುಕಟ್ಟೆ ಮಂಡಿಗಳಿಗೆ ನುಗ್ಗಿ ರೈತರು ತಂದಿದ್ದ ಮಾವಿನ ಕಾಯಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಷರತ್ತುಗಳ ಅನ್ವಯ ಮಾರುಕಟ್ಟೆ ಪ್ರಾರಂಭವಾಗಿ ಕರೊನಾ ಭೀತಿಯಿಂದಲೇ ವಹಿವಾಟು ನಡೆಯುತ್ತಿತ್ತು. ಆದರೆ ಸೋಮವಾರ ಸುರಿದ ಮಳೆಯಿಂದ ನೀರು ಹರಿದು ಹೊರ ಹೋಗಲು ಇರುವ ಚರಂಡಿ ಮುಚ್ಚಿರುವುದರಿಂದ ಮಂಡಿಯೊಳಗೆ ನೀರು ನುಗ್ಗಿ ಮಾವಿನಕಾಯಿ ರಾಶಿಗಳು ಮುಳುಗಿವೆ.

ಎಪಿಎಂಸಿ ಮಾರುಕಟ್ಟೆ ಹಿಂಭಾಗ ಅರಣ್ಯ ಇರುವುದರಿಂದ ಅರಣ್ಯದಿಂದ ಬರುವ ನೀರು ಮಾರುಕಟ್ಟೆ ಪಕ್ಕದಲ್ಲಿರುವ ರಾಜುಕಾಲುವೆಯಿಂದ ಹರಿದುಹೋಗಬೇಕಿತ್ತು. ಮಾರುಕಟ್ಟೆಗೆ ಹೊಂದಿಕೊಂಡಿರುವ ಖಾಸಗಿ ಮಾರುಕಟ್ಟೆಗೆ ಹೋಗಿಬರಲು ಚರಂಡಿ ಮುಚ್ಚಿರುವುದರಿಂದ ಅರಣ್ಯದ ನೀರು ಎಪಿಎಂಸಿ ಮಂಡಿಯೊಳಗೆ ನುಗ್ಗಿದೆ. ಮಾವಿನ ಕಾಯಿ ರಾಶಿಗಳಿಗೆ ನೀರು ನುಗ್ಗಿದ ಕಾರಣ ವ್ಯಾಪಾರಸ್ಥರು ಕಾಯಿ ಖರೀದಿಸಲು ಮುಂದಾಗದೆ ರೈತರು ನಷ್ಟ ಅನುಭವಿಸುವಂತಾಯಿತು.

ಮಂಡಿಗಳ ಬಜಾರ್ ರಸ್ತೆಯ ಎರಡೂ ಕಡೆ ಚರಂಡಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಲಾರಿಗಳು ಮಂಡಿಯೊಳಗೆ ಹೋಗಲು ಅನುಕೂಲವಾಗಲಿ ಎಂದು ಮಂಡಿ ಮಾಲೀಕರು ಚರಂಡಿ ಮುಚ್ಚಿದ್ದಾರೆ. ತೆರವಿಗೆ ಸೂಚನೆ ನೀಡಿದ್ದರೂ ಪಾಲನೆ ಮಾಡಿಲ್ಲ. ರೈತರಿಗೆ ಅಗಿರುವ ನಷ್ಟವನ್ನು ಮಂಡಿ ಮಾಲೀಕರೇ ತುಂಬಿಕೊಡಬೇಕು. ರಮೇಶ್‌ಬಾಬು, ಎಪಿಎಂಸಿ ಅಧ್ಯಕ್ಷ, ಶ್ರೀನಿವಾಸಪರ ರೈತರಿಗೆ ಮೂಲ ಸೌಲಭ್ಯ ಕಲ್ಪಿಸಲು ಮಂಡಿ ಮಾಲೀಕರಿಂದ ಸಾಧ್ಯವಾಗಿಲ್ಲ. ಎಪಿಎಂಸಿ ಆಡಳಿತ ಮಂಡಳಿಯು ಕಣ್ಣು ಮುಚ್ಚಿದೆ. ಚರಂಡಿ ಮುಚ್ಚಿದ್ದರೂ ಕೇಳುವ ಸೌಜನ್ಯ ಎಪಿಎಂಸಿ ಮಂಡಳಿಗಳಿಗಿಲ್ಲ. ಈಗ ರೈತರಿಗೆ ಆಗಿರುವುದು ನಷ್ಟ ತುಂಬಿಕೊಡುವವರು ಯಾರು. ಚಿನ್ನಪ್ಪರೆಡ್ಡಿ, ಜಿಲ್ಲಾ ಮಾವು ಬೆಳೆಗಾರರ ಸಂಘ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net