

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಎಸ್.ಬಿ. ನ್ಯಾಮಗೌಡ ಅವರನ್ನು ವ್ಯಾಪಾರಸ್ಥರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಹಿಂದೆ ಎಪಿಎಂಸಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು ಈಚೆಗೆ ಕಚೇರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸಂದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ಹಾಗೂ ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ ಇವರು ಅಭಿನಂದಿಸಿದರು.
ವ್ಯಾಪಾರಸ್ಥರಿಗೆ ವಹಿವಾಟು ನಡೆಸಲು ಪ್ರೋತ್ಸಾಹ ನೀಡಬೇಕು, ಅಂಗಡಿ ಗೋದಾಮು, ನಿವೇಶನಗಳ ಸೇಲ್ ಡೀಡ್ ಮಾಡಿಕೊಡಬೇಕು, ನಿವೇಶನಗಳ ಕೆಜೆಪಿ ಮಾಡಿಸಬೇಕು, ಎಪಿಎಂಸಿಯಲ್ಲಿ ಮೂಲ ಸೌಲಭ್ಯಗಳ ಸುಧಾರಣೆಗೆ ಕ್ರಮ ವಹಿಸಬೇಕೆಂದು ಸಂದ ಸದಸ್ಯರು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಅನೀಲ ಓಸ್ತವಾಲ, ಸಹಕಾರ್ಯದಶಿರ್ ರವಿ ಮರದ, ಮಾಜಿ ಅಧ್ಯರಾದ ಗಂಗನಗೌಡ ಪಾಟೀಲ, ಬಸವರಾಜ ಯಕಲಾಸಪುರ, ಶಿವನಗೌಡ ಪಾಟೀಲ, ಜಿ.ಬಿ. ಸಾವುಕಾರ, ನಾರಾಯಣ ಭಂಡಾರಕರ, ವೀರಣ್ಣ ವಾಲಿ, ಸುರೇಶ ಓಸ್ತವಾಲ, ನಾಗರಾಜ ಮರದ, ಎಚ್.ಎಂ. ತಲವಾಯಿ, ಈಶ್ವರಪ್ಪ ಹೆಬಸೂರ, ಶಿವಯೋಗಿ ಹೊಸಕಟ್ಟಿ, ವಿನೋದ ಜೈನ್, ಶಿವಾನಂದ ಮುಂತಾದವರು ಉಪಸ್ಥಿತರಿದ್ದರು.