

ಹುಬ್ಬಳ್ಳಿ: ಎಪಿಎಂಸಿ ಸೆಸ್ ಕುರಿತು ಮುಂದಿನ ಹೋರಾಟದ ಬಗ್ಗೆ ದಾವಣಗೆರೆಯಲ್ಲಿ ಸದ್ಯದಲ್ಲೇ ನಡೆಸಲಾಗುವ ಸಭೆಯಲ್ಲಿ ತೀರ್ವನಿಸಲು ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ಎಪಿಎಂಸಿ ವರ್ತಕರ ತುರ್ತು ಸಭೆಯಲ್ಲಿ ನಿರ್ಧರಿಸಲಾಯಿತು.
ಎಪಿಎಂಸಿ ಮಾರುಕಟ್ಟೆ ಒಳಗೆ ಹಾಗೂ ಹೊರಗೆ ಒಂದೇ ತೆರಿಗೆ ಇರಬೇಕು. ಈ ಕುರಿತು ರ್ಚಚಿಸಲು ದಾವಣಗೆರೆಯಲ್ಲಿ ಶೀಘ್ರ ರಾಜ್ಯಮಟ್ಟದ ವರ್ತಕರ ಸಭೆ ಕರೆಯಲಾಗುವುದು. ಬೇಡಿಕೆ ಈಡೇರುವವರೆಗೆ ವಹಿವಾಟು ಬಂದ್ ಮಾಡುವ ಅಥವಾ ಇತರ ಹೋರಾಟದ ಕುರಿತು ಅಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ತಿಳಿಸಿದರು.
ದೇಶಾದ್ಯಂತ ಏಕರೂಪದ ತೆರಿಗೆ ಇರಬೇಕೆಂಬುದು ಕೇಂದ್ರ ಸರ್ಕಾರದ ತೀರ್ವನ. ಈಗಾಗಲೇ ಕೇಂದ್ರ ಸರ್ಕಾರ ಎಪಿಎಂಸಿಯ ಸೆಸ್ಅನ್ನು ಶೂನ್ಯಕ್ಕೆ ಇಳಿಸಿದೆ. ಆದರೆ, ರಾಜ್ಯ ಸರ್ಕಾರ ಸೆಸ್ ಹೇರುತ್ತಿದೆ ಎಂದು ಸಭೆಯಲ್ಲಿದ್ದ ವರ್ತಕರು ಅಸಮಾಧಾನ ವ್ಯಕ್ತಪಡಿಸಿದರು.
ಈ ಮೊದಲು ರಾಜ್ಯ ಸರ್ಕಾರ 35 ಪೈಸೆ ಸೆಸ್ ನಿಗದಿಪಡಿಸಿತ್ತು. ಇತ್ತೀಚೆಗೆ ಅದನ್ನು 1 ರೂ.ಗೆ ಏರಿಸಿತು. ವರ್ತಕರ ವಿರೋಧದಿಂದಾಗಿ ಈಗ 60 ಪೈಸೆ ಸೆಸ್ ನಿಗದಿಪಡಿಸಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷರಾದ ವಿನಯ ಜವಳಿ, ಜಿ.ಜಿ. ಹೊಟ್ಟಿಗೌಡರ, ಪ್ರಧಾನ ಕಾರ್ಯದರ್ಶಿ ಅಶೋಕ ಗಡಾದ, ಧಾರವಾಡ ಎಪಿಎಂಸಿ ಅಧ್ಯಕ್ಷ ಶಿವಶಂಕರ ಹಂಪಣ್ಣವರ, ಹುಬ್ಬಳ್ಳಿಯ ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಶಿವಣ್ಣ ಸಣ್ಣಕ್ಕಿ, ಹುಬ್ಬಳ್ಳಿ ಎಪಿಎಂಸಿ ಸದಸ್ಯ ಚನ್ನು ಹೊಸಮನಿ, ಅಂದಾನಪ್ಪ ಸಜ್ಜನರ, ಶಿವಶಂಕರಪ್ಪ ಮೂಗಬಸ್ತ, ರಾಜಣ್ಣ ಬತ್ಲಿ, ಬಸವರಾಜ ಯಕಲಾಸಪುರ, ಬಸವರಾಜ ಮಮದಾಪುರ ಇತರರಿದ್ದರು. ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ, ಗದಗ, ಕೊಪ್ಪಳ, ಬಳ್ಳಾರಿ, ಧಾರವಾಡ, ವಿಜಯಪುರ, ಮಹಾಲಿಂಗಪುರ, ಲಕ್ಷೆ್ಮೕಶ್ವರ, ಬಾಗಲಕೋಟೆ, ಗಜೇಂದ್ರಗಡ, ಬೆಳಗಾವಿ ಹಾಗೂ ವಿವಿಧೆಡೆಯ ವರ್ತಕರು ಪಾಲ್ಗೊಂಡಿದ್ದರು.
ರಾಜ್ಯ ಸರ್ಕಾರ ಸೆಸ್ಅನ್ನು 25 ಪೈಸೆ ಅಥವಾ ಶೂನ್ಯಕ್ಕೆ ಇಳಿಸಲಿ. ಎಪಿಎಂಸಿ ಮಾರುಕಟ್ಟೆ ಹೊರಗೊಂದು, ಒಳಗೊಂದು ಸೆಸ್ ಆಕರಿಸುವುದು ಸರಿಯಲ್ಲ. ಸರ್ಕಾರ ಶೀಘ್ರ ನಿರ್ಣಯ ಕೈಗೊಳ್ಳದಿದ್ದರೆ ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಿ, ಪ್ರತಿಭಟನೆ ನಡೆಸಲಾಗುತ್ತದೆ ಎಂದು ವರ್ತಕರು ಎಚ್ಚರಿಕೆ ನೀಡಿದರು.
ಪ್ರಮುಖ ನಿರ್ಣಯಗಳ ಕುರಿತು ರ್ಚಚಿಸಲು ರಾಜ್ಯದ ಎಲ್ಲ 162 ಎಪಿಎಂಸಿ ಪ್ರತಿನಿಧಿಗಳ, ವರ್ತಕ ಸಂಘದ ಪ್ರತಿನಿಧಿಗಳ ಹಾಗೂ ಜಿಲ್ಲಾ ವಾಣಿಜೊ್ಯೕದ್ಯಮ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ದಾವಣಗೆರೆಯಲ್ಲಿ ಸಭೆ ಆಯೋಜಿಸಿ, ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಸ್ಪಂದಿಸಲು ಸರ್ಕಾರಕ್ಕೆ 1 ವಾರದ ಕಾಲಾವಕಾಶ ನೀಡಿ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸಲು ತೀರ್ವನಿಸಲಾಯಿತು.