ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಿ

23KOTTUR 03
ಕೊಟ್ಟೂರಿನಲ್ಲಿ ತಹಸೀಲ್ದಾರ್ ಜಿ.ಕೆ.ಅಮರೇಶಗೆ ರೈತ ಸಂಘ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷ ಗಾಳೆಪ್ಪ, ತಾಲೂಕು ಅಧ್ಯಕ್ಷ ಸಿದ್ದಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಸಿ.ರೇಖಾ ಇತರರಿದ್ದರು.
Published on

ಕೊಟ್ಟೂರು: ತಾಲೂಕಿನ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಜಿ.ಕೆ.ಅಮರೇಶಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಗಾಳೆಪ್ಪ ಮಾತನಾಡಿ, ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಿ, ರೈತರ ಉತ್ಪನ್ನಗಳು ಸ್ಪರ್ಧಾತ್ಮಕ ಬೆಲೆಗೆ ಮಾರಾಟವಾಗಬೇಕು. ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸಿ. ತಾಲೂಕಿನ ಎಲ್ಲ ಕೆರೆಗಳ ಹೂಳು ಎತ್ತಿ ಭರ್ತಿ ಮಾಡಿ.

ಬಿತ್ತನೆ ಬೀಜ ರಸಗೊಬ್ಬರದ ಬೆಲೆ ಕಡಿಮೆಗೊಳಿಸಿ. ಸಾಗುವಳಿ ಕಾಲಂನಲ್ಲಿ ಇರುವ ಸಾಗುವಳಿದಾರರಿಗೆ ಈ ಕೂಡಲೇ ಪಟ್ಟಾ ವಿತರಿಸಿ. ಮಳೆ ಮತ್ತು ಗಾಳಿಯಿಂದ ರೈತರಿಗೆ ಆಗಿರುವ ನಷ್ಟ ಸರ್ಕಾರ ಭರಿಸಲಿ. ನಡುಮಾವಿನಹಳ್ಳಿ, ಉಜ್ಜಿನಿ, ಹಿರೇವಡ್ರಳ್ಳಿ, ಮೂರ್ತಿ ನಾಯಕನಹಳ್ಳಿ, ಬೆನಕನಹಳ್ಳಿ ನಾಗೇನಹಳ್ಳಿ, ಬೆಳೆದೇರಿ ಈ ಗ್ರಾಮಗಳಲ್ಲಿ ಕಾಡು ಹಂದಿಗಳ ಹಾವಳಿ ಜಾಸ್ತಿಯಾಗಿದ್ದು, ಅರಣ್ಯ ಇಲಾಖೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net