ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆ ಹಿಂಪಡೆಯಲಿ

100820 Karatagi Various Organations Protest aganist APMC ACt
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರಟಗಿಯಲ್ಲಿ ಶಿರಸ್ತೆದಾರ್ ಮಲ್ಲಿಕಾರ್ಜುನಗೆ ಸಿಐಟಿಯು, ಕೆಪಿಆರ್ ಎಸ್, ಎಐಎಡಬ್ಲ್ಯೂಯು, ಎಸ್‌ಎಫ್‌ಐ, ಎಐಸಿಸಿಟಿಯು ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Published on

ಕಾರಟಗಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆಯನ್ನು ಸರ್ಕಾರ ಶೀಘ್ರ ಹಿಂಪಡೆಯಬೇಕು ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿರಸ್ತೆದಾರ್ ಮಲ್ಲಿಕಾರ್ಜುನಗೆ ಸಿಐಟಿಯು, ಕೆಪಿಆರ್ ಎಸ್, ಎಐಎಡಬ್ಲ್ಯೂಯು, ಎಸ್‌ಎಫ್‌ಐ, ಎಐಸಿಸಿಟಿಯು ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಸೋಮವಾರ ಮನವಿ ಸಲ್ಲಿಸಿದರು.

ಅಗತ್ಯ ಸಾಮಗ್ರಿಗಳ ಕಾಯ್ದೆಗಳಿಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರಿವಾಜ್ಞೆಯನ್ನು ಕೊಡಲೇ ಹಿಂಪಡೆಯಬೇಕು. ಕೃಷಿ ಸಾಲ ಮನ್ನಾ ಮಾಡಬೇಕು ಹಾಗೂ ರೈತರಗೆ ನೂತನ ಸಾಲ ನೀಡಬೇಕು. ಪ್ರತಿಯೊಬ್ಬರಿಗೂ ಮುಂದಿನ 6 ತಿಂಗಳುಗಳ ಕಾಲ 10 ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸುವ ಜತೆಗೆ ಸಾರ್ವತ್ರಿಕ ವಿತರಣಾ ವ್ಯವಸ್ಥೆ ಬಲಪಡಿಸಬೇಕು. ನರೇಗಾದಲ್ಲಿ ಗ್ರಾಮೀಣ ಜನರಿಗೆ ದಿನಕ್ಕೆ 600 ರೂ. ಕೂಲಿಯಂತೆ 200 ದಿನಗಳ ಕಾಲ ಕೆಲಸ ನೀಡಬೇಕು. ಆನ್ ಲೈನ್ ಶಿಕ್ಷಣ ಹಾಗೂ ಲಾಕ್ ಡೌನ್ ವೇಳೆ ಪರೀಕ್ಷೆಗಳನ್ನು ನಿಷೇಧಿಸಬೇಕು. ಅಂಗವಿಕಲರು, ವೃದ್ಧರು ಹಾಗೂ ವಿಧವಾ ವೇತನ ವಿಳಂಬ ಮಾಡದೆ ಪ್ರತಿ ತಿಂಗಳು ನೀಡಬೇಕು. ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರಿಗೆ ಮಾಸಿಕವಾಗಿ 10 ಸಾವಿರ ಭತ್ಯೆ ನೀಡಬೇಕು ಎನ್ನುವುದು ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಪದಾಧಿಕಾರಿಗಳಾದ ಅಮರಮ್ಮ, ಲಕ್ಷ್ಮೀ, ಗಂಗಮ್ಮ, ಕನಕರಾಯ, ಹನುಮಂತ, ಯಲ್ಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net