ಎಪಿಎಲ್‌ಐ ಅಧ್ಯಕ್ಷ ಡಾ. ಯಾವಗಲ್

h15-dr.chandrashekar yavagal
Published on

ಹುಬ್ಬಳ್ಳಿ: ಇಲ್ಲಿಯ ಕಲ್ಯಾಣನಗರದ ಯಾವಗಲ್ ಫೌಂಡೇಷನ್ ನಿರ್ದೇಶಕ ಮತ್ತು ಲೇಸ್‌ವೇದ ಡೆಂಟಲ್ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ ಯಾವಗಲ್ ಅವರು ತೈವಾನ್‌ನ ಏಷಿಯಾ ಪೆಸಿಫಿಕ್ ಲೇಸರ್ ಇನ್‌ಸ್ಟಿಟ್ಯೂಟ್ (ಎಪಿಎಲ್‌ಐ)ನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಈ ಮೂಲಕ ಭಾರತದ ದಂತ ವೈದ್ಯರೊಬ್ಬರು ಅಧ್ಯಕ್ಷ ಹುದ್ದೆಗೇರಿದವರಲ್ಲಿ ಮೊದಲಿಗರಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ವೈದ್ಯರು ಸೇರಿ 18 ವರ್ಷ ಸೇವೆ ಸಲ್ಲಿಸಿದ ಡಾ. ಯಾವಗಲ್ ಅವರನ್ನು ಆಯ್ಕೆ ಮಾಡಿದ್ದರು. ಇದಕ್ಕೂ ಮೊದಲು ಅಂತಾರಾಷ್ಟ್ರೀಯ ಮಟ್ಟದ ಫೆಲೋಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕೆಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಹಾಗಾಗಿ ಡಾ. ಯಾವಗಲ್ ಅವರು ತೈಪೆಗೆ ಕಳೆದ ವರ್ಷ ತೆರಳಿ ಸಂಶೋಧನಾ ವರದಿಯನ್ನು ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net