

ರಾಣೆಬೆನ್ನೂರ: ಎಸ್ಬಿಐ ಯೊನೋ ಎಪಿಕೆ ಫೈಲ್ ಡೌನ್ಲೋಡ್ ಮಾಡಿಕೊಂಡ ವ್ಯಕ್ತಿಯೊಬ್ಬನ ಖಾತೆಯಿಂದ ಅಪರಿಚಿತರು 1.24 ಲಕ್ಷ ರೂ. ವರ್ಗಾವಣೆ ಮಾಡಿಕೊಂಡ ಕುರಿತು ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಿಯಪ್ಪ ಸಿದ್ದಪ್ಪ ಗೋರಮಾಳರ ಎಂಬುವರ ಖಾತೆಯಿಂದ ಹಣ ದೋಚಿರುವುದು.
ಇವರು ಮೊಬೈಲ್ಅನ್ನು ಅಪಡೇಟ್ ಮಾಡುತ್ತಿದ್ದ ಸಮಯದಲ್ಲಿ ಎಸ್ಬಿಐ ಯೊನೋ ಎಪಿಕೆ ಫೈಲ್ ಬಂದಿದೆ. ಅದನ್ನು ಡೌನ್ಲೋಡ್ ಬಳಿಕ ಯಾರೋ ಅಪರಿಚಿತರು ಇವರ ಖಾತೆಯಿಂದ 1.24 ಲಕ್ಷ ರೂ. ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.