ಬಿಜೆಪಿ ಬೆಂಬಲಿತರಿಗೆ ಭರ್ಜರಿ ಜಯ

apcms
Published on

ಕುಶಾಲನಗರ:

ಶುಕ್ರವಾರ ನqದೆ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವುದು ಸಾಧಿಸಿದಾರೆ. ಕುಶಾಲನಗರ ವಿಭಾಗ, ಹೆಬ್ಬಾಲೆ ವಿಭಾಗ, ನಂಜರಾಯಪಟ್ಟಣ ವಿಭಾಗಗಳಲ್ಲಿ ಆಯ್ದ ಭಾಗಗಳ ವಿಭಾಗಗಳಿಗೆ ಮೀಸಲಾತಿ, ಸೇರಿದಂತೆ ಸಾಮಾನ್ಯ ವಿಭಾಗ, ಮಹಿಳಾ ವಿಭಾಗ, ಪರಿಶಿಷ್ಟ ಜಾತಿ ಸೇರಿದಂತೆ 8 ಸ್ಥಾನಗಳಿಗೆ ಸಂಜೆ ತನಕ ಮತದಾನ ನಡೆಯಿತು. ನಂತರ ನಡೆದ ಮತ ಎಣಿಕೆಯಲ್ಲಿ ಹೆಬ್ಬಾಲೆ ಸಾಮಾನ್ಯ ಕ್ಷೇತ್ರದಿಂದ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿ ಹೆಚ್. ಬಿ. ಚಂದ್ರಪ್ಪ, ಹಿಂದುಳಿದ ವರ್ಗ ಪ್ರವರ್ಗ ಎ ಕ್ಷೇತ್ರದಿಂದ ಹೆಚ್.ಎನ್. ಮಹದೇವ, ಮಹಿಳಾ ಮೀಸಲು ಕ್ಷೇತ್ರದಿಂದ ಹೆಚ್.ಟಿ. ಚಂದ್ರಕಲಾ ಅಯ್ಕೆ ಆದರು.

ಕುಶಾಲನಗರ ಬ್ಲಾಕ್ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಬಿ.ಸಿ. ಮಲ್ಲಿಕಾರ್ಜುನ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿ.ಜೆ.ಪಿ. ಬೆಂಬಲಿತ ನಂದಕುಮಾರ್, ಮಹಿಳಾ ಮೀಸಲು ಕ್ಷೇತ್ರದಿಂದ ಬೊಳ್ಳಚಂಡ ಪಾರ್ವತಿ ಮುತ್ತಣ್ಣ ಚುನಾಯಿತರಾದರು.

ಕುಶಾಲನಗರ ಎ ತರಗತಿ ಬ್ಲಾಕ್ ನಿಂದ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಹೆಚ್.ಜೆ ಶರತ್, ನಂಜರಾಯಪಟ್ಟಣ ಎ ತರಗತಿ ಬ್ಲಾಕ್‌ನಿಂದ ಕೆ.ಎಂ. ಪ್ರಸನ್ನ ಅಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧಿಕಾರಿಯೂ ಆದ ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದರು. ಚುನಾವಣಾ ಕಣದಲ್ಲಿ ಮೂರು ಕ್ಷೇತ್ರಗಳಿಂದ 20 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.

ಆಡಳಿತ ಮಂಡಳಿಯ ಒಟ್ಟು ನಿರ್ದೇಶಕ ಸಂಖ್ಯೆ 12. ಇದರಲ್ಲಿ ಸುಂಟಿಕೊಪ್ಪ ಕ್ಷೇತ್ರದಿಂದ 4. ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಾಯಕ ಚುನಾವಣಾಧಿಕಾರಿಯಾಗಿ ಸದೀಪ್, ಸಂಘದ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಕಾರ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net