ವ್ಯಾಸಂಗದ ಜತೆಗೆ ಕ್ರೀಡೆಯೂ ಮುಖ್ಯ

10
ಕಾಗವಾಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕುಂಗ್-ು ಸ್ಪರ್ಧೆಗೆ ಸಸಿಗೆ ನೀರುಣಿಸುವ ಮೂಲಕ ಬಸವೇಶ್ವರ ಶ್ರೀಗಳು ಚಾಲನೆ ನೀಡಿದರು. ರಾಜು ಕಾಗೆ, ಅಮೋಲ ಸರಡೆ, ಸೌರಭ ಪಾಟೀಲ, ಸಂಗಮೇಶ ಲಯದಗುಂದಿ ಇತರರಿದ್ದರು.
Published on

ಕಾಗವಾಡ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಗಳಲ್ಲೂ ಭಾಗವಹಿಸಬೇಕು ಎಂದು ಐನಾಪುರ ಗುರುದೇವಾಶ್ರಮದ ಬಸವೇಶ್ವರ ಶ್ರೀಗಳು ಹೇಳಿದರು.

ಪಟ್ಟಣದ ಮಲ್ಲಿಕಾರ್ಜುನ ವಿದ್ಯಾಲಯದಲ್ಲಿ ಬೆಳಗಾವಿ ಜಿಲ್ಲಾ ವುಶು ಸಂಸ್ಥೆ (ರಿ) ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ವುಶು (ಕುಂಗ್-ು) ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಶಾಸಕ ರಾಜು ಕಾಗೆ ಮಾತನಾಡಿದರು.

200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖಂಡರಾದ ಸಂಗಮೇಶ ಲಯದಗುಂದಿ, ಸೌರಭ ಪಾಟೀಲ, ಡಾ. ಅಮೋಲ ಸರಡೆ, ಮಹೇಶ ಪಾಟೀಲ, ಶಂಕರ ವಾಘಮೋಡೆ, ಶಾಂಥಿನಾಥ ಕರವ, ಸುಧೀರ ಕರವ, ಮಾಸ್ಟರ್‌ಗಳಾದ ಸಂದೀಪ ಪಾಟೀಲ, ರೋಹಿತ ಘುನಕೆ, ಅಭಿಷೇಕ ಸುತಾರ, ಸಂತೋಷ ಜಿರನಾಳೆ, ಮಂಜುನಾಥ ಕೆಂಗೇರಿ, ಜ್ಯೋತಿ ಘಾಟಗೆ, ವೈಷ್ಣವಿ ಖಡಕೆ, ದೀಪಾಲಿ ಮಂಗಸೂಳೆ, ಅಭಿಷೇಕ ಭರಮೆ, ರಾಹುಲ ಬಾಗಡಿ, ಸುನೀಲ ವಾಘಮೋಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net