ಶಿವಮೊಗ್ಗದಲ್ಲೂ ಹುಟ್ಟಿಕೊಳ್ಳುತ್ತಿದ್ದಾರೆ ಆತಂಕವಾದಿಗಳು

mla s.n.channabasappa
ಶಾಸಕ ಎಸ್.ಎನ್.ಚನ್ನಬಸಪ್ಪ
Published on

ಶಿವಮೊಗ್ಗ: ಈ ಹಿಂದೆ ಜಮ್ಮು ಕಾಶ್ಮೀರದ ಮಾದರಿಯಲ್ಲಿದ್ದ ಆತಂಕವಾದಿಗಳು ಇದೀಗ ಶಿವಮೊಗ್ಗದಲ್ಲೂ ಹುಟ್ಟಿಕೊಳ್ಳುತ್ತಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆತಂಕ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಗುರುವಾರ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಾಮಾರಸ್ಯದ ಬದುಕನ್ನು ತೋರಿಸಿದ್ದು ಹಿಂದು ಸಮಾಜ. ಆದರೆ ಇಂತಹ ಹಿಂದುಗಳ ಮನಸ್ಸನ್ನು ಕಲಕುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ತುಷ್ಠಿಕರಣ ನೀತಿ ಮುಂದುವರಿಸಿದ್ದು ಮುಸ್ಲಿಮರ ಮತಕ್ಕಾಗಿ ಚಿಂತನೆ ಮಾಡುತ್ತಿದೆ. ಬಿಜೆಪಿ ವಿಚಾರ, ಸಾಮರಸ್ಯ ಮತ್ತು ಶಾಂತಿಗಾಗಿ ಆಲೋಚಿಸುತ್ತಿದೆ. ರಾಗಿಗುಡ್ಡದ ಗಲಾಟೆಯಲ್ಲಿ ಪಿಎಫ್‌ಐ ಕೈವಾಡ ಇದೆ. ಇದನ್ನು ಪೊಲೀಸರೇ ಹೇಳಿದ್ದಾರೆ. ಹಿಂದುಗಳ ತಾಳ್ಮೆಯನ್ನು ಗಮನಿಸಬೇಕಿದೆ. ಅದನ್ನೇ ದೌರ್ಬಲ್ಯ ಎಂದುಕೊಳ್ಳುವಂತಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net