ಹೊರ ರಾಜ್ಯದ ಕಾರ್ಮಿಕರಿಂದ ಆತಂಕ

Anxiety from out-of-state workers
Published on

ಮಡಿಕೇರಿ:

ಹೆಚ್ಚು ಕಾರ್ಮಿಕರನ್ನು ಬಯಸುವ ಕಾಫಿ ಪ್ರಮುಖ ಬೆಳೆಯಾಗಿರುವ ಕೊಡಗಿನ ಪಾಲಿಗೆ ಹೊರ ರಾಜ್ಯದ ಕಾರ್ಮಿಕರು ಆಪದ್ಭಾಂದವರAತೆ ಕಂಡು ಬರುತ್ತಿದ್ದರೂ ಸೆರಗಿನಲ್ಲಿ ಕಟ್ಟಿಕೊಂಡಿರುವ ಕೆಂಡದAಥ ಅನುಭವ ಆಗುತ್ತಿರುವುದೂ ಸುಳ್ಳಲ್ಲ. ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವರದಿಯಾಗುತ್ತಿರುವ ಬಹುತೇಕ ಅಪರಾಧ ಪ್ರಕರಣಗಳಲ್ಲಿ ವಲಸೆ ಕಾರ್ಮಿಕರ ಪಾತ್ರ ಒಂದಲ್ಲ ಒಂದು ರೀತಿಯಲ್ಲಿ ಕಂಡು ಬರುತ್ತಿದೆ. ಭವಿಷ್ಯದಲ್ಲಿ ಇಂಥ ಕಾರ್ಮಿಕರಿಂದ ಕೊಡಗಿಗೆ ಅಪಾಯ ತಪ್ಪಿದಲ್ಲ ಎನ್ನುವ ಸೂಕ್ಷö್ಮವನ್ನೂ ಪೊಲೀಸ್ ಗುಪ್ತಚರ ಮೂಲಗಳು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿವೆ.

ಕೊಡಗಿನ ಕಾಫಿ ತೋಟಗಳಂತೆ ಇಲ್ಲಿಯ ಕಾಫಿ ತೋಟಗಳ ಕಾರ್ಮಿಕ ಪರಂಪರೆಗೂ ದೊಡ್ಡ ಇತಿಹಾಸವಿದೆ. ಅಕ್ಕ ಪಕ್ಕದ ಜಿಲ್ಲೆಗಳಿಂದ ಬಂದು ಕಾಫಿ ತೋಟಗಳಲ್ಲಿ ದುಡಿಯುತ್ತಲೇ ಸಂಪಾದನೆ ಮಾಡಿ ತೋಟದ ಮಾಲೀಕರಾದವರೂ ಇದ್ದಾರೆ. ಕಾಫಿಗೆ ಪೂರಕ ಉದ್ಯಮಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾದವರ ಸಂಖ್ಯೆಯೂ ದೊಡ್ಡದಿದೆ. ಕಾಫಿ ತೋಟದ ಮಾಲೀಕರ ಕಾಳಜಿಯಿಂದ ವಿದ್ಯಾವಂತರಾಗಿ ಬದುಕು ಕಟ್ಟಿಕೊಂಡವರ ಸಂಖ್ಯೆಯೂ ಕಡಿಮೆಯೇನೂ ಇಲ್ಲ. ಹೀಗೆ ಹಲವು ತಲೆಮಾರುಗಳಿಂದ ಇಲ್ಲಿಯ ಕಾಫಿ ತೋಟಗಳಲ್ಲಿ ಬದುಕು ಕಟ್ಟಿಕೊಂಡಿದ್ದ ಸಾಂಪ್ರದಾಯಿಕ ಕಾರ್ಮಿಕ ಕುಟುಂಬಗಳು ವಿವಿಧ ಕಾರಣಗಳಿಂದ ಬೇರೆ ಬೇರೆ ಉದ್ಯೋಗದ ಮೊರೆ ಹೋಗುತ್ತಿರುವ ಸಂದರ್ಭದಲ್ಲಿ ಕಾಫಿ ತೋಟದಲ್ಲಿ ಕಾರ್ಮಿಕರ ಸಮಸ್ಯೆ ಕಾಣಿಸಿಕೊಂಡಿತು.

ಇAಥ ಸಂದರ್ಭದಲ್ಲಿ ಸುಮಾರು ಒಂದು ದಶಕದ ಹಿಂದೆ ಕೊಡಗಿನಲ್ಲಿ ಕಾಫಿ ಕುಯ್ಲು ಶುರುವಾಗುತ್ತಿದ್ದಂತೆಯೇ ಪಕ್ಕದ ಮೈಸೂರು, ಹಾಸನ ಹಾಗೂ ದೂರದ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಜಿಲ್ಲೆಗೆ ಆಗಮಿಸುತ್ತಿದ್ದರು. ಶ್ರಮವಹಿಸಿ ದುಡಿದು ಕಾಫಿ ಕುಯ್ಲು ಮುಗಿಯುತ್ತಿದ್ದಂತೆಯೇ ಉತ್ತಮ ಸಂಪಾದನೆಯೊAದಿಗೆ ತಮ್ಮೂರಿಗೆ ಮರಳುತ್ತಿದ್ದರು. ಇಂಥ ಕಾರ್ಮಿಕರ ಪೈಕಿ ಬಹುತೇಕರು ಕಾಫಿ ಬೆಳೆಗಾರರ ಜತೆಗೆ ಬಾಂಧವ್ಯವನ್ನೂ ಬೆಳೆಸಿಕೊಂಡು ಊರಿಗೆ ಮರಳಿದ ನಂತರ ನಿರಂತರ ಸಂಪರ್ಕದಲ್ಲಿ ಇರುವುದು, ಪ್ರತಿ ವರ್ಷವೂ ನಿಗದಿತ ಕಾಫಿ ಬೆಳೆಗಾರರ ಬಳಿಗೆ ಮಾತ್ರ ಕೆಲಸಕ್ಕೆ ತೆರಳುವುದು ಸೇರಿದಂತೆ ಅನೇಕ ರೀತಿಯಲ್ಲಿ ಉತ್ತಮ ವಾತಾವರಣದ ಅನುಭವ ಆಗುತ್ತಿತ್ತು.

ಹೊರ ರಾಜ್ಯದ ಕಾರ್ಮಿಕರು ಕೊಡಗಿಗೆ ಕಾಲಿಡುತ್ತಿದ್ದಂತೆಯೇ ಇಲ್ಲಿಯ ವಾತಾವರಣ ಬದಲಾಗಿ ಹೋಯಿತು. ಸ್ಥಳೀಯ ಕಾರ್ಮಿಕರು, ಹೊರ ಜಿಲ್ಲೆಯ ಕಾರ್ಮಿಕರಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಕೂಲಿಗೂ ದುಡಿಯಲು ಬರುವ ಈ ಕಾರ್ಮಿಕರು ಕಾಫಿ ಬೆಳೆಗಾರರ ಪಾಲಿಗೆ ವರವಾಗಿ ಕಂಡುಬAದರು. ಕಾರ್ಮಿಕರ ಕೊರತೆ, ಸ್ಥಳೀಯ ಕಾರ್ಮಿರ ಸ್ವಲ್ಪ ಹೆಚ್ಚು ಎನ್ನಬಹುದಾದ ಕೂಲಿ, ಏರುತ್ತಿರುವ ಕಾಫಿ ತೋಟದ ನಿರ್ವಹಣಾ ವೆಚ್ಚದ ಮಧ್ಯೆ ಹೊರ ರಾಜ್ಯದ ಕಾರ್ಮಿಕರ ಆಗಮನ ಸ್ಥಳೀಯ ಬೆಳೆಗಾರರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು. ನಿಧಾನಕ್ಕೆ ಕೊಡಗಿನೊಳಗೆ ನುಗ್ಗಲಾರಂಭಿಸಿದ ಈ ಕಾರ್ಮಿಕರು ಜಿಲ್ಲೆಯಲ್ಲಿ ಈಗ ಸರ್ವವ್ಯಾಪಿ ಆಗಿದ್ದಾರೆ.

ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ಒಂದು ಸುತ್ತು ಹಾಕಿದರೆ ಸ್ಥಳೀಯವಲ್ಲದ ಹೊಸ ಮುಖಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವುದು ಸಾಮಾನ್ಯವಾಗಿದೆ. ಇವರೀಗ ಕೇವಲ ಕಾಫಿ ತೋಟದ ಕಾರ್ಮಿಕರಾಗಿ ಮಾತ್ರ ಉಳಿದುಕೊಂಡಿಲ್ಲ. ಕಾಫಿ ತೋಟದಿಂದ ಆಚೆಗೂ ದುಡಿಮೆ ಆರಂಭಿಸಿದ್ದಾರೆ. ಸಂತೆಗಳಲ್ಲಿ ವ್ಯಾಪಾರ ಮಾಡುವುದರಿಂದ ಹೋಮ್ ಸ್ಟೇ, ರೆಸಾರ್ಟ್ಗಳಲ್ಲಿ ರೂಂ ಬಾಯ್ ತನಕವೂ ತಮ್ಮ ಕೆಲಸಗಳನ್ನು ವಿಸ್ತರಿಸಿಕೊಂಡಿದ್ದಾರೆ. ಕೃಷಿ, ವ್ಯಾಪಾರ, ಪೇಂಟಿAಗ್, ಗಾರೆ ಕೆಲಸದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಜಿಲ್ಲೆಯಲ್ಲಿ ನಡೆಯುವ ಅಪರಾಧ ಚಟುವಟಿಕೆಗಳಲ್ಲೂ ಇಂಥ ಕಾರ್ಮಿಕರ ಹೆಸರು ಕಾಣಿಸಿಕೊಳ್ಳುತ್ತಿರುವುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ.
ಹೊರ ರಾಜ್ಯದ ಕಾರ್ಮಿಕರ ಪೈಕಿ ಅಸ್ಸಾಂ ಮೂಲದ ಕಾರ್ಮಿಕರೇ ಅಪರಾಧ ಪ್ರಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲಸ ಕೊಟ್ಟ ಕಾಫಿ ಬೆಳೆಗಾರರ ಮೇಲೆಯೇ ಹಲ್ಲೆ ನಡೆಸಿರುವ ಘಟನೆಗಳು ಜಿಲ್ಲೆಯ ಹಲವೆಡೆ ನಡೆದಿದೆ. ಅಕ್ರಮ ಗೋಮಾಂಸ ಮಾರಾಟ, ಕಳುವು, ದರೋಡೆ, ಮಾದಕ ವಸ್ತುಗಳ ಮಾರಾಟ, ಅತ್ಯಾಚಾರ, ಹೊಡೆದಾಟದಂತಹ ಪ್ರಕರಣಗಳಲ್ಲಿ ಅಸ್ಸಾಂ ಮೂಲದ ಕಾರ್ಮಿಕರ ಹೆಸರು ಕೇಳಿಬಂದಿದೆ. ಪೊಲೀಸ್ ಮೂಲಗಳ ಪ್ರಕಾರ ಅಸ್ಸಾಂ ಮೂಲದ ಕಾರ್ಮಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಮುಂದೊAದು ದಿನ ಅಕ್ರಮ ವಲಸಿಗರಿಂದ ಕಾನೂನು, ಸುವ್ಯವಸ್ಥೆಗೆ ದೊಡ್ಡ ಅಡ್ಡಿ ಆಗುವ ಸಾಧ್ಯತೆಗಳೂ ಇವೆ.

'ಇವರು ಅಸ್ಸಾಮಿಗರಲ್ಲ.. ಬಾಂಗ್ಲಾದ ಅಕ್ರಮ ವಲಸಿಗರು,' ಎನ್ನುವ ಮಾತುಗಳು ಅಸ್ಸಾಂ ಕಾರ್ಮಿಕರ ಬಗ್ಗೆ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಆದರೆ ಬಹುತೇಕ ಕಾರ್ಮಿಕರ ಬಳಿ ಅಸ್ಸಾಂ ವಿಳಾಸದ ಆಧಾರ್ ಕಾರ್ಡ್ಗಳಿವೆ. ೨ ವರ್ಷಗಳ ಹಿಂದೆ ಪೊಲೀಸ್ ಇಲಾಖೆ ವತಿಯಿಂದ ತಪಾಸಣೆ ನಡೆಸಿದ ಸಂದರ್ಭ ಅವರ ಬಳಿ ಭಾರತೀಯ ದಾಖಲೆಗಳು ಕಂಡುಬAದಿದ್ದು, ಅಕ್ರಮವಾಗಿ ಇಂಥ ದಾಖಲೆಗಳು ಮಾಡಿಸಿಕೊಂಡಿರುವ ಆರೋಪಗಳೂ ಇದೆ. ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆದುಕೊಂಡು ಬಂದು ಅವರಿಗೆ ಸ್ಥಳೀಯವಾಗಿ ಅಗತ್ಯವಿರುವ ದಾಖಲೆಗಳನ್ನು ಮಾಡಿಕೊಡುವ ದೊಡ್ಡ ಜಾಲ ಇರುವ ಶಂಕೆಯೂ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net