

ಹುಬ್ಬಳ್ಳಿ: ಇಂದಿನ ವಿದ್ಯಾರ್ಥಿಗಳಲ್ಲಿ ಯಾವುದೇ ವಿಷಯದಲ್ಲಿ ಆಸಕ್ತಿ ಕಡಿಮೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಯಲು ಶಿಕರು ಮುಕ್ತ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಪರಪ್ಪ ಚನ್ನಪ್ಪ ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಅನ್ವೇಷಣೆ 4.0 ವಿಜ್ಞಾನ ವಸ್ತು, ಭಿತ್ತಿ ಚಿತ್ರ ಪ್ರದರ್ಶನ ಮತ್ತು ಸಾಂಸತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸತ್ಯದ ಅನ್ವೇಷಣೆಯೇ ನಿಜವಾದ ವಿಜ್ಞಾನವಾಗಿದೆ. ಈ ವಿಷಯವನ್ನು ಶಿಕರು ಮನದಲ್ಲಿರಿಸಿಕೊಂಡು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆವಿಷ್ಕಾರ- ಅನ್ವೇಷಣೆ ಬೆಳೆಯಲು ಅನುಕೂಲ ಮಾಡಿಕೊಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ ಮಾತನಾಡಿ, ವಿಜ್ಞಾನ ೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಪ್ರತಿ ಶಾಲೆ, ಮನೆಯಲ್ಲಿ ಮಕ್ಕಳು ವಿಜ್ಞಾನಿಗಳಾಗಿ ಬೆಳೆಯಬೇಕು ಎಂದರು.
ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಇತರರು ಇದ್ದರು.
ಪ್ರಾಚಾರ್ಯ ವಿ.ಆರ್. ವಾಮೋಡಿ ಸ್ವಾಗತಿಸಿದರು. ಕಾಲೇಜು ವೇದಿಕೆ ಉಪಾಧ್ಯ ವೇಣುಗೋಪಾಲ ಎಚ್.ಆರ್. ಅತಿಥಿಗಳನ್ನು ಪರಿಚಯಿಸಿದರು. ಸಷ್ಟಿ ಮತ್ತು ಕೀರ್ತಿ ಪ್ರಾರ್ಥಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಗಿರೀಜಾ ಬೆಳಗಾವಿ ನಿರೂಪಿಸಿದರು. ಕ್ರೀಡಾ ವಿಭಾಗದ ಉಪಾಧ್ಯ ಅಮ್ರಿತಾ ಅಣ್ಣಿಗೇರಿ ವಂದಿಸಿದರು.
ಸಮಾರೋಪ: ವಿಜ್ಞಾನ ಪ್ರದರ್ಶನ ಸಮಾರೋಪದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗಿರೀಶ ಕಾಡದೇವರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಅನ್ವೇಷಣೆ ಕಾರ್ಯಕ್ರಮದಲ್ಲಿ ಒಟ್ಟು 64 ವಿಜ್ಞಾನದ ಮಾದರಿಗಳು, 40 ವಿಜ್ಞಾನದ ಭಿತ್ತಿ ಚಿತ್ರಗಳು ಮತ್ತು 37 ಸಾಂಸತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳ 375ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾಥಿರ್ಗಳು ಭಾಗವಹಿಸಿ ಪ್ರತಿಭೆ ಪ್ರದಶಿರ್ಸಿದರು.
ವಿಜೇತಾ ಕಾಂಬ್ಳೆ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಿದರು. ಉಪನ್ಯಾಸಕಿ ಸವಿತ ಎಸ್.ಎಚ್. ನಿರೂಪಿಸಿದರು.