

ಹೊಳೆನರಸೀಪುರ: ಹಾಸನ ಲೋಕಸಭಾ ಚುನಾವಣೆಯಲ್ಲಿ ಪುತ್ರ ಶ್ರೇಯಸ್ ಎಂ.ಪಟೇಲ್ ಗೆಲುವು ಸಾಧಿಸಲು ಕಾರಣರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶ್ರೇಯಸ್ ಎಂ.ಪಟೇಲ್ ಅವರ ತಾಯಿ ಹಾಗೂ ಕೆಪಿಸಿಸಿ ಸದಸ್ಯೆ ಅನುಪಮಾ ಮಹೇಶ್ ತಿಳಿಸಿದರು.
ಬುಧವಾರ ತಮ್ಮ ನಿವಾಸದ ಬಳಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಈ ಬಾರಿ ಮತದಾರರು ಬದಲಾವಣೆ ಬಯಸಿದ್ದರು. ಹಾಗಾಗಿ ಬದಲಾವಣೆ ಕಂಡಿದೆ. ಮುಂದಿನ ದಿನಗಳು ಜಿಲ್ಲೆ ಹಾಗೂ ತಾಲೂಕಿನ ಜನತೆ ಪ್ರಜಾಪ್ರಭುತ್ವದ ಅಡಿಯಲ್ಲಿ ವಾಸಿಸಲು ಯೋಗ್ಯ ವಾತಾವರಣ ನಿರ್ಮಿಸುವುದು ನೂತನ ಸಂಸದರ ಪ್ರಮುಖ ಉದ್ದೇಶವಾಗಿದೆ ಎಂದರು.