ಅನುಕುಮಾರ್, ಕನ್ನಹಳ್ಳಿ ಭರತ್ ಅಮಾನತ್ತು ಆದೇಶ ರದ್ದು

download (3)
Published on

ಮೂಡಿಗೆರೆ: ಬಿಜೆಪಿಯಿಂದ ಅಮಾನತ್ತುಗೊಂಡಿದ್ದ ಬಣಕಲ್ ಹೋಬಳಿ ಅಧ್ಯಕ್ಷ ಹಾಗೂ ಪಪಂ ಸದಸ್ಯ ಪಿ.ಜಿ.ಅನುಕುಮಾರ್ ಮತ್ತು ಗೋಣಿಬೀಡು ಹೋಬಳಿ ಬಿಜೆಪಿ ಅಧ್ಯಕ್ಷ ಕನ್ನಹಳ್ಳಿ ಭರತ್ ಅವರ ಅಮಾನತ್ತು ಆದೇಶವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಸೋಮವಾರ ರದ್ದುಪಡಿಸಿದ್ದಾರೆ.
ಕಳೆದ ತಿಂಗಳು ಬಿಜೆಪಿ ತಾಲೂಕು ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ಅವರನ್ನು ನೇಮಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕೆ.ಸಿ.ರತನ್, ಪಿ.ಜಿ.ಅನುಕುಮಾರ್, ಕನ್ನಹಳ್ಳಿ ಭರತ್, ಟಿ.ಎಂ.ಗಜೇಂದ್ರ ಸೇರಿ 11ಆಕಾಂಕ್ಷಿಗಳಿದ್ದರು. ನೂತನ ಅಧ್ಯಕ್ಷರ ಆಯ್ಕೆ ವಿಚಾರವನ್ನು ಮೂಡಿಗೆರೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆ.ಸಿ.ರತನ್ ಘೋಷಿಸಿದ್ದರು. ಹೊಸ ಅಧ್ಯಕ್ಷರ ನೇಮಕಾತಿ ವಿಚಾರ ಘೋಷಿಸಲು ಸಭೆಯಲ್ಲಿ ಜಿಲ್ಲಾಮಟ್ಟದ ಪದಾಧಿಕಾರಿಗಳಿದ್ದಾರೆ. ಅವರನ್ನು ಓವರ್‌ಟೆಕ್ ಮಾಡಿ ಕೆ.ಸಿ.ರತನ್ ಘೋಷಿಸಲು ಏನು ಅಧಿಕಾರವಿದೆ ಎಂದು ಪಿ.ಜಿ.ಅನುಕುಮಾರ್ ಮತ್ತು ಕನ್ನಹಳ್ಳಿ ಭರತ್ ಪ್ರಶ್ನಿಸಿದ್ದರು.
ಈ ವೇಳೆ ಎರಡು ಬಣದ ನಡುವೆ ನಡೆದ ಮಾರಮಾರಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆ.ಸಿ.ರತನ್ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಪಿ.ಜಿ.ಅನುಕುಮಾರ್ ಹಾಗೂ ಕನ್ನಳ್ಳಿ ಭರತ್ ವಿರುದ್ಧ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬೆಳವಣಿಗೆಯಿಂದ ಮುಜುಗರಕ್ಕೊಳಗಾದ ನಾಯಕರು ಬಿಜೆಪಿಯಿಂದ ಇಬ್ಬರು ಮುಖಂಡರನ್ನು ಅಮಾನತ್ತು ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net