ಏ.5ಕ್ಕೆ ಅನುಗ್ರಹ ಪೌರಾಣಿಕ ನಾಟಕ; ಏಕಲವ್ಯ ಚರಿತ್ರೆಗೆ ಹೊಸ ಆಯಾಮ

anugraha
Published on

ಬೆಂಗಳೂರು : ಅಂತರಂಗ ಬಹಿರಂಗ ತಂಡದ 7ನೇ ನಿರ್ಮಾಣ ಅನುಗ್ರಹ ಪೌರಾಣಿಕ ನಾಟಕವು ಏ.5ಕ್ಕೆ ಪ್ರದರ್ಶನಗೊಳ್ಳಲಿದೆ. ಈ ಹಿಂದೆ ಸಾಮಾಜಿಕ ನಾಟಕಗಳನ್ನು ನಿರ್ಮಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ತಂಡವು ಇದೇ ಮೊದಲ ಬಾರಿಗೆ ಪೌರಾಣಿಕ ನಾಟಕವನ್ನು ಪ್ರಸ್ತುತಪಡಿಸುತ್ತಿದೆ.

ರಾಮಕೃಷ್ಣಪ್ಪ ರಚಿಸಿ, ಭಾಷ್ ರಾಘವೇಂದ್ರ ನಿರ್ದೇಶಿಸಿರುವ ಅನುಗ್ರಹ ನಾಟಕವು ಏಕಲವ್ಯನ ಜೀವನಾಧಾರಿತ ಕತೆ. ಇಲ್ಲಿಯವರೆವಿಗೂ ಕೇಳಿರುವ ಏಕಲವ್ಯನ ಕಥೆಗಿಂತ ಭಿನ್ನವಾದ ಆಯಾಮವನ್ನು ಲೇಖರು ಈ ನಾಟಕದಲ್ಲಿ ನೀಡಿದ್ದಾರೆ. ಯಾವುದೇ ಗುರುವು ತನ್ನ ಶಿಷ್ಯರಿಗೆ ವಿದ್ಯೆ ಕರುಣಿಸಿದ ನಂತರ ಶಿಷ್ಯರಲ್ಲಿ ಎಂದೂ ವಿದ್ಯೆಗೇ ಅಪಚಾರವಾಗುವಂತಹ ಬೇಡಿಕೆಯನ್ನು ಇಡುವುದಿಲ್ಲ. ದ್ರೋಣರು ಏಕಲವ್ಯನಲ್ಲಿ ಇಟ್ಟ ಬೇಡಿಕೆಯ ಸತ್ಯಾಸತ್ಯತೆಯನ್ನು ಅನಾವರಣಗೊಳಿಸುವ ಯತ್ನ ನಾಟಕದಲ್ಲಿ ನಡೆದಿದೆ.

ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಅಂದು ಸಂಜೆ 4.30 ಹಾಗೂ 7.30ಕ್ಕೆ ಎರಡು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ಟಿಕೆಟ್ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗೆ ದೂ : 8660547776 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net