ಅನುಗ್ರಹ ಕಾಲೇಜು ಪ್ರತಿಭಾ ಪುರಸ್ಕಾರ

anugraha
ಅನುಗ್ರಹ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಭೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಂಚಾಲಕ ಫಾ.ಅಬೆಲ್ ಲೋಬೋ ಉದ್ಘಾಟಿಸಿದರು. ಪ್ರಾಂಶುಪಾಲ ಫಾ.ವಿಜಯ್ ಲೋಬೋ, ಕಾಲೇಜು ಮಂಡಳಿ ಸದಸ್ಯರು ಸ್ಟಾೃನಿ ಪಿಂಟೋ, ಅನಿತಾ ಮೋನಿಸ್ ಉಪಸ್ಥಿತರಿದ್ದರು.
Published on

ಬೆಳ್ತಂಗಡಿ: ಅನುಗ್ರಹ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಭೆ, ಪ್ರತಿಭಾ ಪುರಸ್ಕರ ಕಾರ್ಯಕ್ರಮ ನಡೆಯಿತು. ಸಂಚಾಲಕ ಫಾ.ಅಬೆಲ್ ಲೋಬೋ ಅಧ್ಯಕ್ಷತೆ ವಹಿಸಿದರು. ಸಂಪನ್ಮೂಲ ವ್ಯಕ್ತಿ ಕೊಕ್ರಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನೋರ್ಬರ್ಟ್ ಮಾರ್ಟಿಸ್ ಭಾಗವಹಿಸಿದ್ದರು.

ಶಾಲಾ ಪ್ರಾಂಶುಪಾಲ ಫಾ.ವಿಜಯ್ ಲೋಬೋ, ಕಾಲೇಜು ಮಂಡಳಿ ಸದಸ್ಯರು ಸ್ಟಾನಿ ಪಿಂಟೋ, ಅನಿತಾ ಮೋನಿಸ್ ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರಜ್ವಲಿ ಸ್ವಾಗತಿಸಿ, ಉಪನ್ಯಾಸಕಿ ಗೀತಾ ಜೋಷಿ ವರದಿ ಮಂಡಿಸಿದರು. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಅಸ್ಲಾಮಿಯ ಆಯಿಷಾ, ಜೆರಿನ್, ಸ್ಯಾಮ್ಸನ್ ಡಿಸೋಜ ಅವರನ್ನು ಪುರಸ್ಕರಿಸಲಾಯಿತು. ಪ್ರಾಂಶುಪಾಲ ಫಾ.ವಿಜಯ್ ಲೋಬೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಅರುಣ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net