ಅನುಗ್ರಹ ವಿದ್ಯಾಸಂಸ್ಥೆ ವಿದ್ಯಾರ್ಥಿ ಸಮಿತಿಗಳ ಉದ್ಘಾಟನೆ

anugraha
Published on

ಕುಶಾಲನಗರ:

ಇಲ್ಲಿನ ಅನುಗ್ರಹ ವಿದ್ಯಾಸಂಸ್ಥೆಯ ಪಿಯುಸಿ ಹಾಗೂ ಪದವಿ ವಿಭಾಗದ ವಿದ್ಯಾರ್ಥಿ ಸಮಿತಿಗಳ ಉದ್ಘಾಟನೆ ಹಾಗೂ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಶನಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕುಶಾಲನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಸೀನಪ್ಪ, ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕಿದೆ. ದಾರಿ ತಪ್ಪಿಸುವ ವಯಸ್ಸಾದ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಬಹಳಷ್ಟು ಏಕಾಗ್ರತೆ ವಹಿಸಿ ವ್ಯಾಸಂಗ ಮಾಡುವ ಮೂಲಕ ತಮ್ಮ ಸುಂದರವಾದ ಕಾಲೇಜು ಅವಧಿಯನ್ನು ಒಳಿತಿಗೆ ಬಳಸಿಕೊಂಡು ಸಮಾಜದ ಸತ್ಪ್ರಜೆಯಾಗಬೇಕು. ವಿದ್ಯಾರ್ಥಿಗಳು ಆಸಕ್ತಿದಾಯಕ ಕ್ಷೇತ್ರಗಳನ್ನು ಆರಿಸಿಕೊಂಡು ಶೈಕ್ಷಣಿಕವಾಗಿ ಸಾಧನೆ ತೋರುವ ಮೂಲಕ ಸಮಾಜದ ಆಸ್ತಿಯಾಗಬೇಕು. ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕೆ ಮೀಸಲಾಗದೆ ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಿಗಳಾಗಬೇಕೆಂದರು.

ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಎಸ್.ಕೆ. ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿ ನಿರ್ದೇಶಕರಾದ ಶೋಭಾ ಸತೀಶ್, ಕೆ.ಕೆ. ಹೇಮಂತಕುಮಾರ್, ಪ್ರಾಂಶುಪಾಲ ಪ್ರೊ. ಹೆಚ್.ಬಿ .ಲಿಂಗಮೂರ್ತಿ, ಪಿಯು ವಿಭಾಗದ ಉಪಪ್ರಾಂಶುಪಾಲೆ ಎಂ.ಎಸ್. ಸೀಮಾ, ಪದವಿ ವಿಭಾಗದ ಬಿ.ಎಸ್. ಹರ್ಷಿತಾ, ವಿದ್ಯಾರ್ಥಿ ಸಮಿತಿ ಸಂಯೋಜಕರಾದ ಬಿ.ಎಸ್. ಶ್ವೇತಾ, , ಸಾಂಸ್ಕೃತಿಕ ಸಂಯೋಜಕರಾದ ನುಸೃತ್, ಲೀಲಾ ಕುಮಾರಿ, ರೇಷ್ಮಾ ಇದ್ದರು.

ಇದೇ ಸಂದರ್ಭ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ವೈವಿಧ್ಯಗಳು ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net