ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ನೀಡುವ ಸಾಧಕರಾಗಬೇಕು

anugraha
Published on

ಕುಶಾಲನಗರ:

ಸಮಾಜಕ್ಕೆ ಮಹತ್ತರವಾದ ಕೊಡುಗೆಗಳನ್ನು ಕೊಡುವ ಮಹಾದವಕಾಶಗಳನ್ನು ನೀಡುವಂಥ ವ್ಯಕ್ತಿಗಳಾಗಿ ವಿದ್ಯಾರ್ಥಿಗಳು ಸಾಧಕರಾಗಬೇಕೆಂದು ಕುಶಾಲನಗರದ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಹೇಳಿದರು. ಕುಶಾಲನಗರದ ಅನುಗ್ರಹ ಕಾಲೇಜಿನ ಪದವಿ ವಿಭಾಗದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಸಾಧನೆಯ ಹಾದಿಯಲ್ಲಿ ಯಾವುದೇ ಟೀಕೆಗಳು ಬಂದರೂ ವಿದ್ಯಾರ್ಥಿಗಳು ಧೃತಿಗೆಡದೇ ಮುಂದೆ ಹೆಜ್ಜೆಯಿಡಬೇಕು. ವಿದ್ಯಾರ್ಥಿಗಳು ಯಾವುದೇ ಸಮಾಜ ಬಾಹಿರ ಚಟುವಟಿಕೆಗಳಿಗೆ ತೊಡಗದೇ ಸಜ್ಜನ ನಾಗರಿಕರಾಗಬೇಕು ಎಂದರು.

ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿ ಬಿ.ಎಂ. ದರ್ಶನ್ ಅವರು ಹೊರತಂದ ಪ್ರಬೋಧಿನಿ ಕಿರು ಕಾದಂಬರಿ ಬಿಡುಗಡೆ ಮಾಡಿದ ಸಾಹಿತಿ ಕಣಿವೆ ಭಾರದ್ವಾಜ್ ಕೆ. ಆನಂದ ತೀರ್ಥ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತರಾಗದೇ ಶಾಲಾ ಕಾಲೇಜು ಹಂತದಿAದಲೇ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಕಲಿಕೆಯ ಹಂತದಿAದಲೇ ತಾವು ಗ್ರಹಿಸಿದ ವಿಚಾರಗಳನ್ನು ಬರಹಕ್ಕೆ ಇಳಿಸುವ ಮೂಲಕ ವಿದ್ಯಾರ್ಥಿ ದರ್ಶನ್ ಮಾದರಿಯಲ್ಲಿ ಸಾಹಿತ್ಯಾಸಕ್ತರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾದಂಬರಿ ಲೇಖಕ ವಿದ್ಯಾರ್ಥಿ ದರ್ಶನ್ ಮಾತನಾಡಿ, ಪಿಯು ಹಂತದಿAದಲೇ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಂಡೆ. ಕಾಲೇಜಿನ ಉಪನ್ಯಾಸಕರು ನನಗೆ ಪೂರಕವಾಗಿ ಸಹಕಾರ ನೀಡಿದರು. ಪ್ರಬೋಧಿನಿ ಕಾದಂಬರಿ ಕಾಲ್ಪನಿಕವಾದ ವಾಸ್ತವಕ್ಕೆ ದೂರವಾದ ಕಥಾ ಹಂದರವಾಗಿದೆ ಎಂದರು.

ಅನುಗ್ರಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಕೆ. ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜೋಪಯೋಗಿ ಕಾಯಕ ಹಾಗೂ ಚಿಂತನೆಗಳಿAದಾಗಿ ಜೀವನದ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲ ಪ್ರೊ. ಹೆಚ್.ಬಿ. ಲಿಂಗಮೂರ್ತಿ, ಉಪನ್ಯಾಸಕರಾದ ಲೀಲಾಕುಮಾರಿ ತೊಡಿಕಾನ, ಬಿ.ಎನ್. ಹರ್ಷಿತಾ, ಶ್ವೇತಾ, ವಿದ್ಯಾರ್ಥಿ ಪರಿಷತ್ತು ಉಪಾಧ್ಯಕ್ಷ ಬಿ.ಜಿ. ಭುವನ್, ಕಾರ್ಯದರ್ಶಿ ಕೆ.ಎಸ್. ಅಂಜು, ಜಂಟಿ ಕಾರ್ಯದರ್ಶಿ ಎಂ.ವಿ. ವಿನಯ್, ಕ್ರೀಡಾ ಕಾರ್ಯದರ್ಶಿ ಬಿ.ಎಸ್. ಮಹೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಡಿ.ಹೆಚ್. ಇಂಚನಾ ಇದ್ದರು.

ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net