ಹಾಕಿಯಲ್ಲಿ ಜಿಲ್ಲಾ ಮಟ್ಟಕ್ಕೆ ಅನುಗ್ರಹ ಪಿಯು ಕಾಲೇಜು

Anugrah PU College to District Level in Hockey
Published on

ಕುಶಾಲನಗರ:

ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜು ಜಿಲ್ಲಾ ಮಟ್ಟದ ಹಾಕಿ ಕ್ರಿಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದೆ. ಕೂಡಿಗೆಯ ಕ್ರೀಡಾ ಪ್ರೌಢ ಶಾಲೆ ಮೈದಾನದಲ್ಲಿ ಗುರುವಾರ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಮಟ್ಟದ ಬಾಲಕರ ಹಾಕಿ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ತೋರಿಸುವ ಮೂಲಕ ಅನುಗ್ರಹ ಪದವಿ ಪೂರ್ವ ಕಾಲೇಜು ಈ ಅರ್ಹತೆ ಪಡೆದುಕೊಂಡಿದೆ.

ಅನುಗ್ರಹ ಪದವಿ ಪೂರ್ವ ಕಾಲೇಜು ತಂಡ 3-0 ಅಂತರದಲ್ಲಿ ಕೂಡಿಗೆ ಪದವಿಪೂರ್ವ ಕಾಲೇಜು ತಂಡವನ್ನು ಮಣಿಸಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಿತು.


ಅನುಗ್ರಹ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಅಭಿಷೇಕ್ ಕೆ. ಆರ್., ಕ್ರೀಡಾ ಶಾಲೆಯ ಹಾಕಿ ತರಬೇತುದಾರ ವೆಂಕಟೇಶ್, ಪ್ರಾಂಶುಪಾ¯ ಪ್ರೊ. ಲಿಂಗಮೂರ್ತಿ ಈ ಸಂದರ್ಭ ಇದ್ದು ತಂಡಕ್ಕೆ ಪ್ರೋತ್ಸಾಹ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net