

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಇಂಗಳದಾಳ್ ಗ್ರಾಮದ ಅಭಿವೃದ್ಧಿಗೆ ನಾಲ್ಕು ಕೋಟಿ ರೂ.ಅನುದಾನ ಒದಗಿಸಿದ್ದು,ಸಣ್ಣ-ಪುಟ್ಟ ರಸ್ತೆ ಕಾಮಗಾರಿ ಹೊರ ತುಪಡಿಸಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಬಾಕಿ ಇಲ್ಲವೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಗ್ರಾಮದಲ್ಲಿ ಸೋಮವಾರ ಶ್ರೀ ಮಾರಿಕಾಂಭ ಕಲಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ವಾಲ್ಮೀಕಿ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,ಸಮಾಜ ಕಲ್ಯಾಣ ಇಲಾಖೆಯ 10 ಲಕ್ಷ ಮತ್ತು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ 60 ಲಕ್ಷ ರೂ.ಸೇರಿದಂತೆ 70 ಲಕ್ಷರೂ.ವೆಚ್ಚದಲ್ಲಿ ಸುಸಜ್ಜಿತ ವಾಲ್ಮೀಕಿ ಭವನ ನಿರ್ಮಾಣವಾಗಲಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ,ಹಿಂದುಳಿದ ವರ್ಗದವರು ಇರುವ ಈ ಭಾಗದಲ್ಲಿ, ಮದುವೆ ಮೊದಲಾದ ಸಮಾರಂಭಗಳಿಗೆ ಅನುಕೂಲವಾಗಲಿದೆ ಎಂದರು.
2 ಕೋಟಿ ರೂ.ವೆಚ್ಚದಲ್ಲಿ 2ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದ್ದು,ಎರಡೂ ಕೋಡಿ ಬಿದ್ದಿರುವುದು ಸಂತಸ ತಂದಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ಇನ್ನೊಂದು ಚೆಕ್ ಡ್ಯಾಂ ನಿರ್ಮಾಣಕ್ಕೆ ಟೆಂಡರ್‌ಕರೆಯಲಾಗಿದೆ. ಊರಿನ ಮುಂಭಾಗದಲ್ಲಿ 40 ಲಕ್ಷ ರೂ.ವೆಚ್ಚದೊಂದಿಗೆ ವಿಶಾಲ ಸಿ.ಸಿ.ರಸ್ತೆಯನ್ನು ನಿರ್ಮಿಸಲಾಗಿದೆ. ಗ್ರಾಮದ ಎರಡ್ಮೂರು ರಸ್ತೆಗಳ ಅಭಿವೃದ್ಧಿಗೆ 50 ಲಕ್ಷ ರೂ.ಕೊಡಲಾಗಿದೆ. ಇಂಗಳದಾಳ್ ಗ್ರಾಪಂಗೆ 150 ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಜಲ ಜೀವನ್ ಮಿಷನ್ ಅಡಿಯಲ್ಲಿ ವಿ.ವಿ.ಸಾಗರದಿಂದ ಕುಡಿಯುವ ನೀರು ವ್ಯವಸ್ಥೆ ಸಹ ಮಾಡಲಾಗುತ್ತದೆ. ನನ್ನ ಕ್ಷೇತ್ರದ 184 ಹಳ್ಳಿಗಳ ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆರೆಗೆ ನೀರು ತುಂಬಿಸುವ ಯೋಜನೆಗೆ ಕುರುಮರಡಿಕೆರೆ ಸೇರಿಸಲಾಗಿದೆ. ಶ್ರೀ ಮಾರಿಕಾಂಭ ಕಲಾ ಮತ್ತು ಸಾಂಸ್ಕೃತಿಕ ಭಜನಾ ಸಂಘದ ದೇಶದ ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕೆಂಚಪ್ಪ,ಪಿ.ಕೆ.ರಾಮಣ್ಣ,ಜಿ.ತಿಪ್ಪೇಸ್ವಾಮಿ,ಜಿ.ಟಿ.ಓಬಣ್ಣ, ಬಿ.ಅಶೋಕ್,ಆರ್.ಎಚ್.ಉಮೇಶ್,ಎಸ್.ಮಂಜುನಾಥ್,ಜಿ.ಟಿ.ನಾಗರಾಜ್, ಕೆ.ಟಿ.ಗಾದ್ರಪ್ಪ,ಪಿ.ಒ.ತಿಮ್ಮಯ್ಯ,ಹನುಮಣ್ಣ,ಮಹಾಂತೇಶ್ ತಳವಾರ್,ರಾಮಣ್ಣ,ಜಿ.ಟಿ.ಮಹಾಂತೇಶ್,ಎಲ್.ತಿಪ್ಪಯ್ಯ,ಪಾಲಯ್ಯ, ಓಬಳೇಶ್,ನಿರ್ಮಿತಿ ಕೇಂದ್ರ ಇಂಜಿನಿಯರ್ ರವಿ ಇತರರು ಇದ್ದರು.
-----