

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ದಿಗ್ವಿಜಯ ನ್ಯೂಸ್ ಕೊಡಗು ಜಿಲ್ಲಾ ವರದಿಗಾರ ಬಾಚರಣಿಯಂಡ ಅನು ಕಾರ್ಯಪ್ಪ ಬರೆದಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ನಿವಾಸ ಕೃಷ್ಣದಲ್ಲಿ ಸೋಮವಾರ ಪುಸ್ತಕ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಅಪ್ಪಚೆಟ್ಟೋಳಂಡ ಕೌಟುಂಬಿಕ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮತ್ತಿತರರು ಇದ್ದರು.
೧೯೯೭ ರಲ್ಲಿ ಪಾಂಡಂಡ ಕುಟ್ಟಪ್ಪ ಆರಂಭ ಮಾಡಿದ ಕೊಡವ ಹಾಕಿ ಪಂದ್ಯಾವಳಿ ೨೦೧೮ ರವರೆಗೆ ನಡೆದು ಬಂದ ಹಾದಿಯನ್ನು ಪುಸ್ತಕ ರೂಪ ದಲ್ಲಿ ಹೊರತರಲಾಗಿದೆ. ೨೦೨೩ ರಲ್ಲಿ ಹಾಕಿ ಹಬ್ಬ ನಡೆಸುತ್ತಿರುವ ಅಪ್ಪಚೆಟ್ಟೋಳಂಡ ಕುಟುಂಬದ ಪರಿಚಯ, ೨೦೨೪ ರಲ್ಲಿ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸುವ ಕುಂಡ್ಯೋಳಂಡ ಕುಟುಂಬದ ಪರಿಚಯ ಈ ಕೃತಿಯಲ್ಲಿದೆ.
ಕೊಡಗಿನಲ್ಲಿ ೧೮ ಹಾಕಿ ಒಲಂಪಿಯನ್‌ಗಳಿದ್ದು ಅವರನ್ನು ಪುಸ್ತಕದಲ್ಲಿ ಪರಿಚಯಿಸಲಾಗಿದೆ. ಪುಸ್ತಕದ ಮುನ್ನುಡಿಯನ್ನು ಒಲಂಪಿಯನ್ ಅಂಜಪರವಂಡ ಬಿ. ಸುಬ್ಬಯ್ಯ ಬರೆದಿದ್ದಾರೆ.