ಯುದ್ಧ ವಿರೋಧಿ ದಿನ : ಮೈಸೂರಿನಲ್ಲಿ ಎಸ್‌ಯುಸಿಐ ಪ್ರತಿಭಟನೆ

Anti-War Day SUCI protest in Mysore
Published on

ಮೈಸೂರು: ಯುದ್ಧ ವಿರೋಧಿ ದಿನದ ಅಂಗವಾಗಿ ಸೋಷಿಯಲಿಸ್ಟ್‌ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ವತಿಯಿಂದ ಪುರಭವನ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಭಾರತವು ಸ್ವಾತಂತ್ರೃ ನಂತರ ಅನುಸರಿಸಿದ ಯುದ್ಧ ವಿರೋಧಿ ಅಲಿಪ್ತ ವಿದೇಶಾಂಗ ನೀತಿಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಬಿಟ್ಟಿದೆ. ಭಾರತವು ಒಂದೆಡೆ ಪ್ಯಾಲೆಸ್ತೇನ್ ಮತ್ತು ಲೆಬನಾನ್‌ಗೆ ಪರಿಹಾರ ಸಾಮಾಗ್ರಿಗಳನ್ನು ನೀಡಿದರೆ, ಮತ್ತೊಂದೆಡೆ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಮತ್ತು ಮಾನವ ಸಂಪನ್ಮೂಲಗಳನ್ನು ಪೂರೈಸುತ್ತಿದೆ. ರಷ್ಯಾಗೆ ಸೈನಿಕರನ್ನು, ಮಿಲಿಟರಿ ಸಲಕರಣೆಗಳನ್ನು ಒದಗಿಸಿದ್ದಾರೆ ಎಂದು ಎಸ್‌ಯುಸಿಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಸ್‌ಯುಸಿಐ ಪದಾಧಿಕಾರಿಗಳಾದ ಬಿ.ರವಿ, ಚಂದ್ರಶೇಖರ ಮೇಟಿ, ಯಶೋಧರ್, ಪಿ.ಎಸ್.ಸಂಧ್ಯಾ, ಸೀಮಾ, ಟಿ.ಆರ್. ಸುನಿಲ್, ಎಸ್. ಸುಮಾ, ಚಂದ್ರಕಲಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net