ರ‍್ಯಾಗಿಂಗ್ ವಿರೋಧಿ ಜಾಗೃತಿ ಅಭಿಯಾನ

ragging
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಡಿಎಲ್‌ಎಸ್ ಕಾರ್ಯದರ್ಶಿ ಮರಿಯಮ್ ಸಲೋಮಿ ರ‍್ಯಾಗಿಂಗ್ ವಿರೋಧಿ ಜಾಗೃತಿ ಅಭಿಯಾನ ಉದ್ಘಾಟಿಸಿದರು. ಡಿಎಲ್‌ಎಸ್‌ಎ ಸೆಕ್ಷನ್ ಅಧಿಕಾರಿ ಎ.ಪಿ.ಕೇಶವನ್, ಕಾಸರಗೋಡು ಟೌನ್ ಪೊಲೀಸ್ ಎಸ್‌ಐ ಸಜಿಮೋನ್ ಜಾರ್ಜ್ ಇದ್ದರು.
Published on

ಕಾಸರಗೋಡು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ(ಡಿಎಲ್‌ಎಸ್)ಕಾಸರಗೋಡು, ನಗರ ಪೊಲೀಸ್ ಠಾಣಾ ಪೊಲೀಸರ ಸಹಯೋಗದಲ್ಲಿ ವಿದ್ಯಾನಗರ ಸರ್ಕಾರಿ ಕಾಲೇಜಿನಲ್ಲಿ ರ‍್ಯಾಗಿಂಗ್ ವಿರೋಧಿ ಜಾಗೃತಿ ಅಭಿಯಾನ ಇತ್ತೀಚೆಗೆ ನಡೆಯಿತು.

ಡಿಎಲ್‌ಎಸ್‌ಎ ಕಾರ್ಯದರ್ಶಿ, ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ಮರಿಯಮ್ ಸಲೋಮಿ ಅಭಿಯಾನ ಉದ್ಘಾಟಿಸಿದರು. ಪೊಲೀಸ್ ಅಧಿಕಾರಿಗಳು, ವಕೀಲರು, ರ‍್ಯಾಗಿಂಗ್ ವಿರೋಧಿ ಜಾಗೃತಿಯೊಂದಿಗೆ ಪಿ.ಎಲ್.ವಿಗಳು ಕಾಲೇಜು ಅಧಿಕಾರಿಗಳನ್ನೊಳಗೊಂಡ ತಂಡ ಎಲ್ಲ ತರಗತಿಗಳಿಗೂ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ರ‍್ಯಾಗಿಂಗ್ ಬಗ್ಗೆ ಜಾಗೃತಿ ಮೂಡಿಸಿತು. ಕಾನೂನು ಸೇವಾ ಪ್ರಾಧಿಕಾರ ಜಿಲ್ಲೆಯ ಕ್ಯಾಂಪಸ್‌ಗಳಲ್ಲಿ ರ‍್ಯಾಗಿಂಗ್ ವಿರೋಧಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಡಿಎಲ್‌ಎಸ್‌ಎ ಸೆಕ್ಷನ್ ಅಧಿಕಾರಿ ಎ.ಪಿ.ಕೇಶವನ್, ಕಾಸರಗೋಡು ಟೌನ್ ಪೊಲೀಸ್ ಎಸ್.ಐ ಸಜಿಮೋನ್ ಜಾರ್ಜ್, ಕಾಲೇಜು ರ‍್ಯಾಗಿಂಗ್ ವಿರೋಧಿ ಸಮಿತಿ ಸಂಚಾಲಕ ರಾಧಾಕೃಷ್ಣ ಬೆಳ್ಳೂರು, ಶಿಕ್ಷಕರಾದ ಅಭಿಲಾಷ್, ಲಕ್ಷ್ಮೀ, ವಕೀಲ ಚಷನ್ಯ, ಪೊಲೀಸ್ ಅಧಿಕಾರಿಗಳಾದ ರಾಜೀಶ್, ಸುಜಿತ್, ಶ್ರೀಜೇಶ್, ಡಿಎಲ್‌ಎಸ್‌ಎ ಪಿಎಲ್‌ವಿಗಳಾದ ಪಿ.ಕವಿತಾ, ಪಿ.ವಿ.ಚಿತ್ರಾ, ಅಬ್ಬಾಸ್ ಸೈಫುದ್ದೀನ್, ಎ.ಆರ್.ಅನಿತಾ, ಷರೀಫ್ ಮುಗು, ತಾಜುದ್ದೀನ್, ಸುನಂದಾ, ಶ್ರೀಲೇಖಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net