

ಹೂವಿನಹಡಗಲಿ: ದೇಶ ವಿರೋಧಿ ಹೇಳಿಕೆ ನೀಡಿರುವವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದ ಶಾಸ್ತ್ರೀ ವೃತ್ತದಲ್ಲಿ ಬಿಜೆಪಿ ತಾಲೂಕು ಘಟಕ ಶನಿವಾರ ಪ್ರತಿಭಟನೆ ನಡೆಸಿತು.
ಅಮೂಲ್ಯ ಲಿಯೋನ ಮತ್ತು ಆರ್ದ್ರಾ ಇವರಿಂದ ದೇಶದಲ್ಲಿ ಶಾಂತಿ ಭಂಗ ಉಂಟಾಗುತ್ತದೆ. ಇವರಿಗೆ ಮಾತನಾಡಲು ಅವಕಾಶ ಕೊಟ್ಟ ಸಂಘಟನೆ ಕಾರ್ಯಕರ್ತರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಎಸ್.ಸಂಜೀವರೆಡ್ಡಿ, ಮಾಜಿ ಶಾಸಕ ಬಿ.ಚಂದ್ರನಾಯ್ಕ, ಜಿಪಂ ಸದಸ್ಯ ಪಿ.ವಿಜಯಕುಮಾರ್, ತಾಪಂ ಸದಸ್ಯ ಈಟಿ ಲಿಂಗರಾಜ್, ಮಾಜಿ ಅಧ್ಯಕ್ಷ ಎಂ.ಬಿ.ಬಸವರಾಜ್, ಮಧುನಾಯ್ಕ, ದೂದಾನಾಯ್ಕ, ಶಿರಾಜ್ ಬಾವಿಹಳ್ಳಿ, ಶಿವಪುರ ಸುರೇಶ, ವಕೀಲ ವೀರನಗೌಡ, ಬಸವರಾಜ್ ಇತರರಿದ್ದರು. ನಂತರ ಗ್ರೇಡ್ 2 ತಹಸೀಲ್ದಾರ್ ಪ್ರಭಾಕರಗೌಡಗೆ ಮನವಿ ಸಲ್ಲಿಸಿದರು.