ದೇಶ ವಿರೋಧಿಗಳನ್ನು ಗಡಿಪಾರು ಮಾಡುವಂತೆ ಬಿಜೆಪಿ, ಬಿಎಂಎಸ್, ಕರವೇ, ಜೈಭೀಮ ಯುವಸೇನೆ ಒತ್ತಾಯ

220220 Hutti Various Organition Protest
Published on

ಹಟ್ಟಿಚಿನ್ನದಗಣಿ: ದೇಶದ ಅನ್ನ ತಿಂದು, ಪಾಕ್ ಪ್ರೇಮ ಮೆರೆದ ಅಮೂಲ್ಯ ಹಾಗೂ ಆರ್ದ್ರಾಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಬಿಜೆಪಿ, ಬಿಎಂಎಸ್, ಕರವೇ, ಜೈಭೀಮ ಯುವಸೇನೆ ಸದಸ್ಯರು ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಮುಖಂಡ ಎನ್.ಸ್ವಾಮಿ ನಾಯಿಕೋಡಿ ಹಾಗೂ ಮೌನೇಶ ಕಾಕಾನಗರ ಮಾತನಾಡಿ, ಪಾಕಿಸ್ತಾನವನ್ನು ಬೆಂಬಲಿಸುವ ದೇಶದ್ರೋಹಿಗಳನ್ನು ಕೂಡಲೇ ಗಡಿಪಾರು ಮಾಡಬೇಕು. ಅಂಬೇಡ್ಕರ್ ಒದಗಿಸಿರುವ ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಪ್ರತಿಭಟನೆ ನೆಪದಲ್ಲಿ ವಿರೋಧಿ ದೇಶವನ್ನು ಹೊಗಳಿ ದೇಶಕ್ಕೆ ಅವಮಾನ ಮಾಡಿದ ಕ್ರಿಮಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಿಎಂಎಸ್‌ನ ಅಮರೇಶನಾಯಕ, ಕರವೇ ಮುಖಂಡ ಮೌನೇಶ ಕಾಕಾನಗರ, ಶ್ರೀನಿವಾಸ, ಜೈಭೀಮ ಸೇನೆಯ ಮಲ್ಲಿಕಾರ್ಜುನ ಚಿತ್ರನಾಳ, ಬುಜ್ಜಾನಾಯಕ್, ಸುನೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net