ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ನಿರ್ಧಾರ ಸಲ್ಲದು: ಪೇಜಾವರ ಶ್ರೀ

vishwaprasanna sri pejavara mutt
Published on

ಉಡುಪಿ: ಕರ್ನಾಟಕದ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಸಮಾಜದಲ್ಲಿ ಏರ್ಪಟ್ಟಿದ್ದ ಕೆಲವು ಗೊಂದಲಗಳ ಪರಿಹಾರಕ್ಕಾಗಿ ಈ ಎರಡೂ ಕಾಯ್ದೆ ಜಾರಿ ಮಾಡಲಾಗಿತ್ತು. ಮತಾಂತರದ ಹಾವಳಿಯಿಂದ ಕುಟುಂಬವೇ ಛಿದ್ರವಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ತಪ್ಪಿಸಲು ಮತಾಂತರ ನಿಷೇಧ ಕಾಯ್ದೆ ತರಲಾಗಿದೆ. ಹಳ್ಳಿಗಳಲ್ಲಿ ಮಹಿಳೆಯರು ಹಸು ಸಾಕಿ ಹಾಲು ಮಾರಿ ಜೀವನ ಸಾಗಿಸುತ್ತಿರುವಾಗ ರಾತ್ರೋರಾತ್ರಿ ಗೋಕಳ್ಳರು ಹಟ್ಟಿಗೆ ನುಗ್ಗಿ ತಲವಾರು ತೋರಿಸಿ ಹಸು ಕದ್ದೊಯ್ಯುತ್ತಿದ್ದರು. ಇಂಥ ತೊಂದರೆ ಗಮನಿಸಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಜನಾಭಿಪ್ರಾಯ ಗಮನಿಸಿ ಕಾಯ್ದೆ ಹಿಂಪಡೆಯದೆ ತಟಸ್ಥ ಧೋರಣೆ ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net