ಸಾರಿಗೆ ಸಂಸ್ಥೆಯಲ್ಲಿ ಬಾಲ ಕಾರ್ವಿುಕರ ವಿರೋಧಿ ದಿನ

New nwkrtc new
Published on

ಹುಬ್ಬಳ್ಳಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಗುರುವಾರ ವಿಶ್ವ ಬಾಲಕಾರ್ವಿುಕರ ವಿರೋಧಿ ದಿನ ಆಚರಿಸಲಾಯಿತು.

ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ನೌಕರರು ಬಾಲ ಹಾಗೂ ಕಿಶೋರ ಕಾರ್ವಿುಕರಿಂದ ದುಡಿಮೆಯನ್ನು ಬಯಸುವುದಿಲ್ಲವೆಂಬ ಪ್ರಮಾಣ ವಚನವನ್ನು ಮುಖ್ಯ ಕಲ್ಯಾಣ ಅಧಿಕಾರಿ ಪಿ.ವೈ. ನಾಯಕ ಅವರು ಬೋಧಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಅಧ್ಯಕ್ಷತೆ ವಹಿಸಿದ್ದರು. ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಗಣೇಶ ರಾಠೋಡ, ಐ.ಕೆ. ಕಂದಗಲ್, ಸಿದ್ದೇಶ್ವರ ಹೆಬ್ಬಾಳ, ಶ್ರೀನಾಥ ಜಿ., ಶಶಿಧರ ಕುಂಬಾರ, ಅಧಿಕಾರಿಗಳಾದ ಎಂ.ಬಿ. ಕಪಲಿ, ಕೆ.ಎಲ್.ಗುಡೆನ್ನವರ, ರವಿ ಅಂಚಿಗಾವಿ, ಧಶರಥ ಕೆಳಗೇರಿ, ತೖಶಿನ್ಬಾನು ಪಟವೇಗಾರ್, ಪಿ. ಆರ್. ಕಿರಣಗಿ, ನವೀನಕುಮಾರ ತಿಪ್ಪಾ, ಗುರುಪ್ರಸಾದ ಹೋಗಾಡಿ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net