

ಬೆಂಗಳೂರು: ಅಂತರಂಗ ರಂಗತಂಡ ವತಿಯಿಂದ 5 ಮತ್ತು 6ರಂದು ಬಸವನಗುಡಿ ಬಳಿಯ ಡಾ. ಸಿ. ಅಶ್ವತ್ಥ್ ಕಲಾಭವನದಲ್ಲಿ ರಾತ್ರಿ 7.15ಕ್ಕೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. 5ರಂದು ವೈ.ವಿ. ಗುಂಡೂರಾವ್ ಅವರಿಂದ ‘ಕೈಲಾಸಂ ಝಲಕ್’ ಮತ್ತು ಕೈಲಾಸಂ ಅವರ ‘ಹೋಂ ರೂಲು’ ನಾಟಕ ಪ್ರದರ್ಶನ ನಡೆಯಲಿದೆ. ನವಿರಾದ ಹಾಸ್ಯ ಮತ್ತು ವಿಡಂಬನೆಯ ಈ ನಾಟಕವನ್ನು ವೈ.ವಿ. ಗುಂಡೂರಾವ್ ನಿರ್ದೇಶಿಸಿದ್ದಾರೆ. 6ರಂದು ‘ಬೀಚಿ ಬುಲೆಟ್ಸ್’ ಮತ್ತು ‘ಕೈಲಾಸಂ ಕಹಾನಿ’ ನಾಟಕಗಳು ಮೂಡಿಬರಲಿವೆ. ಬೀಚಿ ಅವರ ಜೀವನದ ಘಟನೆಗಳನ್ನು ಆಧರಿಸಿ ರಸವತ್ತಾಗಿ ರೂಪಿಸಿರುವ ಈ ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ ಹೊಣೆಯನ್ನು ಶ್ರೀಧರ್ ಯಡ್ರಾವಿ ನಿರ್ವಹಿಸಲಿದ್ದಾರೆ. ಅವರದು. ಬುಕ್ ಮೈ ಶೋದಲ್ಲಿ ಮತ್ತು ಪ್ರದರ್ಶನ ನಡೆಯುವ ದಿನಗಳಂದು ಟಿಕೆಟ್ ಲಭ್ಯವಿರಲಿದೆ. ವಿವರಗಳಿಗೆ ದೂ: 98809 14509 ಸಂಪರ್ಕಿಸಿ.