

ಬೆಂಗಳೂರು: ಅಂತರಂಗ ತಂಡವು ಒಡನಾಡಿ ಬಂಧು ಸಿಜಿಕೆ -75ರ ಮಾಸದ ನೆನಪು ಸರಣಿ ಕಾರ್ಯಕ್ರಮದ- 6ರ ಅಂಗವಾಗಿ ಭಾನುವಾರ (ಅ.26) ಕವಿ ಡುಂಡಿರಾಜ್ ಅವರ ‘ಕಾಯುವ ಕಾಯಕ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ನಗರದ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿನ ನಯನ ಸಭಾಂಗಣದಲ್ಲಿ ಸಂಜೆ 6.30ಕ್ಕೆ ಅರ್ಚನಾ ಶ್ಯಾಮ್ ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಇದಕ್ಕೂ ಮುನ್ನ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಿ.ಜಿ.ಕೆ ಒಡನಾಟದಲ್ಲಿದ್ದ ರಂಗ ಸಂಘಟಕ ವಿ.ಎಂ. ನಾಗೇಶ್ ಸಿ.ಜಿ.ಕೆ ಅವರೊಂದಿಗಿನ ಒಡನಾಟವನ್ನು ಸ್ಮರಿಸಲಿದ್ದಾರೆ.