ಅಂತರಘಟ್ಟಮ್ಮ ರಥೋತ್ಸವ ಸಂಪನ್ನ

18 HHR P 05
ಹೊಳೆಹೊನ್ನೂರಿನ ಗ್ರಾಮ ದೇವತೆ ಶ್ರೀ ಅಂತರಘಟ್ಟಮ್ಮ ದೇವಿ ರಥೋತ್ಸವದ ಸಡಗರ.
Published on

ಹೊಳೆಹೊನ್ನೂರು: ಗ್ರಾಮದೇವತೆ ಶ್ರೀ ಅಂತರಘಟ್ಟಮ್ಮ ದೇವಿ ರಥೋತ್ಸವವು ಶುಕ್ರವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ನಾಲ್ಕು ದಿನದ ಜಾತ್ರಾ ಮಹೊತ್ಸವವು ದೇವಿ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.

ರಾಜ್ಯದ ವಿವಿಧ ಭಾಗಗಳಿಂದ ತರಿಸಿದ ಪುಷ್ಪಗಳಿಂದ ದೇವಿಯ ಅಲಂಕಾರ ಮಾಡಲಾಗಿತ್ತು. ಮುಂಜಾನೆ ಶ್ರೀದೇವಿ ಶಿಲಾಮೂರ್ತಿಗೆ ಪುಣ್ಯತೀರ್ಥ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಮಾಡಲಾಯಿತು.
ಮಹಿಳೆಯರು ದೇವಿಗೆ ಮಡಿಲಕ್ಕಿ, ಸೀರೆ ಕುಪ್ಪಸ ನೀಡಿ ಭಕ್ತಿ ಸಮರ್ಪಿಸಿದರು. ಬಳಿಕ ಉತ್ಸವ ಮೂರ್ತಿಯನ್ನು ತಮಟೆ, ಓಲಗ, ಡೋಲು, ಭಜಂತ್ರಿಯೊಂದಿಗೆ ಸಿಡಿಮದ್ದು ಸಿಡಿಸಿ ದೇವಸ್ಥಾನದ ಆವರಣದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಪುಷ್ಪಾಲಂಕೃತ ರಥದಲ್ಲಿ ದೇವಿಯನ್ನು ಕೂರಿಸಿ ರಥೋತ್ಸವ ನಡೆಸಲಾಯಿತು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣವನ್ನು ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net