ಮೈಸೂರಿನಲ್ಲಿ ’ಅಂತರಧ್ವನಿ ನಾಯಕತ್ವ ಸಮ್ಮೇಳನ’

42
Published on

ಮೈಸೂರು: ಹೆಚ್ಚು ಸಾಮರ್ಥ್ಯ ಮತ್ತು ಶಕ್ತಿ ಹೊಂದಿರುವ ಮಹಿಳೆಯರು ಸಮಾಜದಲ್ಲಿ ಮುಂದೆ ಬರಬೇಕು ಎಂದು ಅಂತರಧ್ವನಿ ಸಂಸ್ಥಾಪಕ ಮತ್ತು ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದ ಕಾರ್ಯಾಧ್ಯಕ್ಷ ಡಾ.ಬಿ.ಎಸ್.ಅಜಯ್ ಕುಮಾರ್ ಹೇಳಿದರು.
ನಗರದ ಇಂಟರ್ ನ್ಯಾಷಷನಲ್ ಹ್ಯೂಮನ್ ಡೆವಲಪ್‌ಮೆಂಟ್ ಆ್ಯಂಡ್ ಅಪ್ಲಿಫ್ಟ್‌ಮೆಂಟ್ ಅಕಾಡೆಮಿ (ಐಎಚ್‌ಡಿಯುಎ) ಸಹಯೋಗದೊಂದಿಗೆ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ’ಅಂತರಧ್ವನಿ ನಾಯಕತ್ವ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ದೇಶದಲ್ಲಿ ಎಲ್ಲರೂ ಸಮಾನರು. ಮಹಿಳೆಯರಿಗೆ ಸಮಾನ ಹಕ್ಕುಗಳು, ಅವಕಾಶ ಮತ್ತು ಸೌಲಭ್ಯಗಳು ಸಿಗಬೇಕು. ಯಾವುದೇ ಧರ್ಮದಲ್ಲಿ ತಾರತಮ್ಯ ಮಾಡಬಾರದು. ಸಂವಿಧಾನದ ಪ್ರಕಾರ ಮಹಿಳೆಯರು ಸೇರಿದಂತೆ ಅಲ್ಪಸಂಖ್ಯಾತರಿಗೆ ಭದ್ರತೆ ನೀಡಬೇಕಾಗಿದೆ. ಆದರೆ ನಮ್ಮದು ಪುರುಷ ಪ್ರಧಾನ ಸಮಾಜವಾಗಿರುವುದರಿಂದ ನಾವು ಅವರಿಗೆ ಹಕ್ಕುಗಳನ್ನು ನೀಡುತ್ತಿಲ್ಲ. ವಿವಿಧ ನಾಯಕತ್ವದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಹಿಳೆಯರು ಸೇರಿದಂತೆ ಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ಅಂತರಧ್ವನಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕರದ ಮಾಜಿ ಜಂಟಿ ಕಾರ್ಯದರ್ಶಿ ರವಿ ಜೋಶಿ ಮಾತನಾಡಿ, ಸಂವಿಧಾನ ಮತ್ತು ವಿವಿಧ ಹಕ್ಕುಗಳ ಕುರಿತು ವಿವರಿಸಿದರು. ಮೈಸೂರಿನ ಸೈಬರ್ ಕ್ರೈಂ ತರಬೇತುದಾರ ಎಸ್.ಲಿಂಗರಾಜು ಅವರು ಸೈಬರ್ ಅಪರಾಧ ಮತ್ತು ನಕಲಿ ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸಿದರು. ಸ್ವಚ್ಛ ಸರ್ವೇಕ್ಷಣ 2023ರ ಬ್ರಾಂಡ್ ಅಂಬಾಸಿಡರ್ ಫಾಲ್ಕಿಯಾ ಖಾನ್ ಮಾತನಾಡಿದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕಾರ್ಯಕ್ರಮ ಉದ್ಘಾಟಿಸಿದರು. ಗುಂಡ್ಲುಪೇಟೆಯ ಜಯಶ್ರೀ ರಾಜು, ಪ್ರಮೀಳಾ ಕುನ್ವರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net